Dharwad | ಚಾಕುವಿನಿಂದ ಇರಿದು ಬಾಲಕನ ಹತ್ಯೆ
Update: 2026-01-15 01:09 IST
ಧಾರವಾಡ : ಚಾಕುವಿನಿಂದ ಇರಿದು ಬಾಲಕನನ್ನು ಹತ್ಯೆಗೈದಿರುವ ಘಟನೆ ಕುಂದಗೋಳ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಸೂಸೈಟಿ ಮೈದಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ಬಾಲಕನನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಮಲ್ಲಿಕಾರ್ಜುನ ಅವಾರಿ (16) ಎಂದು ತಿಳಿದು ಬಂದಿದೆ.
ಕೃತ್ಯ ಎಸಗಿರುವವರು ಯಾರು ಮತ್ತು ಯಾಕೆ ಎಂಬುದನ್ನ ಪೊಲೀಸರು ತನಿಖೆಯನ್ನು ಮಾಡುತ್ತಿದ್ದು, ಆ ಪ್ರದೇಶದ ಸಿ.ಸಿ ಟಿವಿ ದೃಶ್ಯಗಳ ಪರಿಶೀಲನೆ ಮಾಡುತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್‌ಗೆ ರವಾನಿಸಲಾಗಿದ್ದು, ಡಿವೈಎಸ್ಪಿ ವಿನೋದ ಮುಕ್ತಿದಾರ, ಪೊಲೀಸ್ ಇನ್‌ಸ್ಪೆಕ್ಟರ್ ಸಮೀರ್ ಮುಲ್ಲಾ, ಪಿಎಸ್‌ಐ ಇಮ್ರಾನ್ ಪಠಾಣ ಸ್ಥಳ ಪರಿಶೀಲನೆ ಮಾಡಿದ್ದಾರೆ.