×
Ad

ಗ್ಲೋಬಲ್ ಇ- ಕ್ರಿಕೆಟ್ ಪ್ರೀಮಿಯರ್ ಲೀಗ್: ಚೆನ್ನೈ ಫಾಲ್ಕನ್ಸ್ ಚಾಂಪಿಯನ್

Update: 2025-05-04 20:41 IST

ಬೆಂಗಳೂರು : ಜೆಟ್ ಸಿಂಥೆಸಿಸ್ ಸಂಸ್ಥೆಯ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಗ್ಲೋಬಲ್ ಇ- ಕ್ರಿಕೆಟ್ ಪ್ರೀಮಿಯರ್ ಲೀಗ್ (ಜಿಇಪಿಎಲ್) ಪಂದ್ಯಾವಳಿಯ 2ನೇ ಆವೃತ್ತಿಯ ಪಂದ್ಯಗಳು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿದೆ.

ತೀವ್ರ ಸ್ಪರ್ಧಾತ್ಮಕವಾಗಿ ನಡೆದ ಪಂದ್ಯಾವಳಿಯ ಫೈನಲ್‌ ನಲ್ಲಿ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಅಂತಿಮವಾಗಿ ಚೆನ್ನೈ ಫಾಲ್ಕನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಚೆನ್ನೈ ಫಾಲ್ಕನ್ಸ್ ತಂಡ ವಿನ್ನರ್ ಆದರೆ ಮುಂಬೈ ಗ್ರಿಜ್ಲೀಸ್ ತಂಡವು ಎರಡನೇ ಸ್ಥಾನ ಮತ್ತು ದೆಹಲಿ ಶಾರ್ಕ್ಸ್ ತಂಡಗಳು ಮೂರನೇ ಸ್ಥಾನ ಪಡೆದವು.

ಪುಣೆ ಸ್ಟಾಲಿಯನ್ಸ್ ಮಾಲಕ ನಟ ಸುನೀಲ್ ಶೆಟ್ಟಿ , ಮುಂಬೈ ಗ್ರಿಜ್ಲೀಸ್ ಮಾಲಕಿ ಸಾರಾ ತೆಂಡೂಲ್ಕರ್ , ದೆಹಲಿ ಶಾರ್ಕ್ಸ್ ಮಾಲೀಕ, ಲೆನ್ಸ್‌ ಕಾರ್ಟ್ ಸಂಸ್ಥಾಪಕ ಮತ್ತು ಸಿಇಓ ಪೀಯೂಷ್ ಬನ್ಸಲ್, ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಕ್ಯೂರ್‌ಫುಡ್ಸ್ ಸಂಸ್ಥಾಪಕ ಅಂಕಿತ್ ನಾಗೋರಿ, ಆಕ್ಸೆಲ್ ಇಂಡಿಯಾ ಪಾಲುದಾರ, ಬೆಂಗಳೂರು ಬ್ಯಾಡ್ಜರ್ಸ್ ತಂಡದ ಸಹ-ಮಾಲಕ ಪ್ರಶಾಂತ್ ಪ್ರಕಾಶ್ , ಟಿವಿಎಸ್ ಕ್ಯಾಪಿಟಲ್ ಫಂಡ್ಸ್ ಲಿಮಿಟೆಡ್ ಅಧ್ಯಕ್ಷ ಗೋಪಾಲ್ ಶ್ರೀನಿವಾಸನ್, ಟಿವಿಎಸ್ ಕ್ಯಾಪಿಟಲ್ ಫಂಡ್ಸ್ ಲಿಮಿಟೆಡ್ ಅಧ್ಯಕ್ಷ ಮಧುಸೂದನನ್ ಆರ್, ಜಿಎಸ್ ಗ್ಲೋಬಲ್ ಗ್ರೂಪ್ ಸಿಇಓ, ಚೆನ್ನೈ ಫಾಲ್ಕನ್ಸ್ ತಂಡದ ಸಹ-ಮಾಲಕ ಅರ್ಜುನ್ ಸಂತಾನಕೃಷ್ಣನ್  ಮತ್ತು ಎನ್ ಎನ್ ಬಿ ಗ್ರೂಪ್ ನಿರ್ದೇಶಕ, ಹೈದರಾಬಾದ್ ರೈನೋಸ್ ಮಾಲಕ ಅಮಿತ್ ಮೆಹತಾ ಉಪಸ್ಥಿತರಿದ್ದರು.

Delete Edit
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News