×
Ad

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾತ್ರವಲ್ಲ, ಹೃದಯವಂತರನ್ನಾಗಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ : ಕೆ.ವಿ.ಪ್ರಭಾಕರ್

Update: 2025-11-19 21:11 IST

ಬೆಂಗಳೂರು : ಮಗುವಿನ ಜನನದ ಜೊತೆಗೇ ಕಲಾವಿದ/ಕಲಾವಿದೆಯ ಜನನವೂ ಆಗುತ್ತದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾತ್ರವಲ್ಲ, ಹೃದಯವಂತರನ್ನಾಗಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ‌ ಎಂದು  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಬಾಲಭವನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಮಾತನಾಡಿದರು.

ಮಕ್ಕಳು ಹುಟ್ಟುತ್ತಲೇ ಅವರೊಳಗೆ ಕಲೆಯೂ ಹುಟ್ಟುತ್ತದೆ. ಆದ್ದರಿಂದ ಒಂದು ಮಗುವಿನ ಜನನ ಆಗಿದೆ ಎಂದರೆ ಕಲಾವಿದ/ ಕಲಾವಿದೆಯೊಬ್ಬರ ಜನನವೂ ಆಗಿದೆ ಅಂತಲೇ ಅರ್ಥ. ಕಲೆ ಮಕ್ಕಳ ಕೈಗಳಲ್ಲಿ, ನಾಲಗೆಯಲ್ಲಿ, ಬಾಯಿಯಲ್ಲಿ ಅರಳುವುದಿಲ್ಲ. ಕಲೆ ಮೊದಲು ಅರಳುವುದು ಮಕ್ಕಳ ಕಲ್ಪನಾ ಲೋಕದಲ್ಲಿ, ಮಕ್ಕಳ ಆಲೋಚನೆಯಲ್ಲಿ, ಮಕ್ಕಳ ಹೃದಯದಲ್ಲಿ ಮತ್ತು ಮಕ್ಕಳ ಮನಸ್ಸಿನಲ್ಲಿ. ಮಕ್ಕಳ ಆಲೋಚನೆಗಳ ಒಳಗೆ ಮೊಳಕೆಯೊಡೆಯುವ ಕಲೆ, ಅವರ ಕೈಗಳ ಮೂಲಕ, ಕಂಠದ ಮೂಲಕ ವ್ಯಕ್ತ ಆಗುತ್ತವೆ. ಆದ್ದರಿಂದ ಮಕ್ಕಳ ಮನೋಲೋಕವನ್ನು ನಾವು ಮೊದಲಿಗೆ ಅರಳಿಸಬೇಕು‌ ಎಂದು ಕರೆ ನೀಡಿದರು.

ಹೀಗೆ ಅರಳಬೇಕಾದರೆ ಮಕ್ಕಳಿಗೆ ಮಣ್ಣಿನ, ಪುಸ್ತಕಗಳ ಒಡನಾಟ ಬೇಕು. ಮೊಬೈಲ್ ಗಳ ಸಹವಾಸ ಮಕ್ಕಳಲ್ಲಿನ ಸೃಜನಶೀಲತೆಯನ್ನು ಮುದುಡುವಂತೆ ಮಾಡುತ್ತವೆ. ಉದಾಹರಣೆಗೆ ದೆವ್ವ ಮತ್ತು ಭೂತಗಳು ಹೇಗೆ ಇರುತ್ತವೆ, ಹೇಗೆ ಕಾಣುತ್ತವೆ ಎನ್ನುವುದನ್ನು ಪುಸ್ತಕಗಳ ಒಡನಾಟದಲ್ಲಿರುವ ಮಕ್ಕಳಿಗೆ, ಮೊಬೈಲ್ ಗಳ ಸಹವಾಸದಲ್ಲಿರುವ ಮಕ್ಕಳಿಗೆ ಕೇಳಿ ನೋಡಿ. ಓದುವ ಮಕ್ಕಳು ವಿವರಿಸುವ ರೀತಿ ವಿಶಾಲವಾಗಿರುತ್ತದೆ. ಅವರ ಕಲ್ಪನಾ ಲೋಕದಲ್ಲಿ ಹುಟ್ಟುವ ದೆವ್ವ, ಭೂತಗಳು ವೈವಿದ್ಯಮಯವಾಗಿರುತ್ತವೆ. ಮೊಬೈಲ್ ಮಕ್ಕಳು ಕೇವಲ ನೋಡಿದ್ದನ್ನು ವಿವರಿಸುತ್ತವೆ. ಇಲ್ಲಿ ಕಲ್ಪನಾಲೋಕ ಇರುವುದಿಲ್ಲ. ಕೇವಲ ನೋಡಿದ್ದರ ನೆನಪಿನಲೋಕ ಇರುತ್ತದೆ. ಈ ಕಾರಣಕ್ಕೇ ಮೊಬೈಲ್ ಬಿಡಿ, ಪುಸ್ತಕ ಹಿಡಿ ಎನ್ನುವ ಕಾರ್ಯಕ್ರಮವನ್ನು ಸರಕಾರ ರೂಪಿಸಿದೆ ಎಂದರು.

ಆದ್ದರಿಂದ ನಾವೆಲ್ಲಾ ಸಾಧ್ಯವಾದಷ್ಟೂ ಮಕ್ಕಳ ಮನೋಲೋಕ ಅರಳಿಸುವ ಕಾರ್ಯಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ನೀಡೋಣ. ಈ ಕಾರ್ಯವನ್ನು ಜವಾಹರ್‌ ಲಾಲ್ ಅವರು ಸ್ಥಾಪಿಸಿದ ಬಾಲ ಭವನ ನಿರ್ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News