×
Ad

ಜ.2ರಿಂದ ʼದಲಿತ ಸಾಹಿತ್ಯ ಮತ್ತು ಚಳವಳಿ-50’ ಅಧ್ಯಯನ ಶಿಬಿರ : ಎಲ್.ಎನ್.ಮುಕುಂದರಾಜ್

Update: 2025-12-31 18:34 IST

ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ.2ರಿಂದ ಜ.4ರ ವರೆಗೆ ಮೂರು ದಿನಗಳ ಕಾಲ ‘ದಲಿತ ಸಾಹಿತ್ಯ ಮತ್ತು ಚಳುವಳಿ-50’ ಎಂಬ ಅಧ್ಯಯನ ಶಿಬಿರವನ್ನು ಜ್ಞಾನಭಾರತಿ ಆವರಣದ ವೆಂಕಟಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.

ಬುಧವಾರ ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧ್ಯಯನ ಶಿಬಿರದ ನಿರ್ದೇಶಕರಾಗಿ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು, ಶಿಬಿರದ ಸಹ ನಿರ್ದೇಶಕರಾಗಿ ಲೇಖಕಿ ದು.ಸರಸ್ವತಿ, ಸುಬ್ಬು ಹೊಲೆಯಾರ್, ಹಾಗೂ ಶಿಬಿರದ ಸಂಚಾಲಕರಾಗಿ ಸಾಹಿತ್ಯ ಅಕಾಡಮಿಯ ಸದಸ್ಯ ಡಾ.ರವಿಕುಮಾರ್ ಬಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿವಿಯ ಕುಲಪತಿ ಡಾ.ಜಯಕರ ಎಸ್.ಎಂ ವಹಿಸಲಿದ್ದು, ಕಾರ್ಯಕ್ರಮದ ದಿಕ್ಸೂಚಿ ಮಾತುಗಳನ್ನು ದಸಂಸ ಮುಖಂಡ ಪ್ರೊ.ಎಚ್. ಗೋವಿಂದಯ್ಯ ಅವರು ಆಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಮತ್ತು ಚಳವಳಿ ನಡೆದು ಬಂದ ದಾರಿ, ಉಂಟು ಮಾಡಿದ ಪರಿಣಾಮ, ಪ್ರಸ್ತುತ ಸ್ಥಿತಿ ಈ ಎಲ್ಲ ವಿಷಯಗಳ ಕುರಿತು 3 ದಿನ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಈ ಅಧ್ಯಯನ ಶಿಬಿರದಲ್ಲಿ ವಿಷಯಕ್ಕೆ ಪೂರಕವಾಗಿ ಪಂಚಮ ಪತ್ರಿಕೆ ಆಧಾರಿತ, ಚಂದ್ರಶೇಖರ ಕೆ. ಅವರ ನಿರ್ದೇಶನದ ‘ಪಂಚಮಪದ’ ಎಂಬ ನಾಟಕವನ್ನು ಪ್ರದರ್ಶನವನ್ನು ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ಸುಮಾರು 100 ಜನ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News