ಇಂಧನ ದರ ಏರಿಕೆ | ಕೇಂದ್ರ ಬಿಜೆಪಿ ಸರಕಾರ ಜನಪರವಾಗಿಲ್ಲ: ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರಕಾರ ಜನಪರವಾಗಿಲ್ಲ ಎಂದು ಸಾಬೀತುಪಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟೀಕಿಸಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪರೀತ ಬೆಲೆ ಏರಿಕೆ ಆಗಿದೆ. ಪದೇ ಪದೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಲಾಗಿದೆ. ಇದನ್ನು ಕೇಂದ್ರ ಮಾಡಬಾರದಿತ್ತು ಎಂದು ಹೇಳಿದರು.
ಹಿಜಾಬ್ ಹಿಂದಿನಿಂದಲೂ ಹಾಕುತ್ತಿದ್ದರು. ಹೊಸದಾಗಿ ಏನೂ ಹಾಕುತ್ತಿಲ್ಲ. ಮಧ್ಯದಲ್ಲಿ ಇವರೇ ಗೊಂದಲ ಸೃಷ್ಟಿ ಮಾಡಿದರು ಎಂದ ಅವರು, ಚುನಾವಣೆ ಆಯೋಗ ನಡೆಸುವ ಎಸ್‍ಐಆರ್ ಬಗ್ಗೆ ನಮಗೆಲ್ಲರಿಗೂ ಅನುಮಾನಗಳಿವೆ. ಅದು ಪಶ್ಚಿಮ ಬಂಗಾಳ ಇರಬಹುದು, ಬೇರೆ ಬೇರೆ ರಾಜ್ಯದಲ್ಲಿ ಎಲ್ಲೆಲ್ಲಿ ಎಸ್‍ಐಆರ್ ಮಾಡಿದ್ದಾರೋ ಅಲ್ಲೆಲ್ಲ ಅನುಮಾನಗಳು ಹುಟ್ಟಿಕೊಂಡಿವೆ. ಕೆಲವರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಕೆಲವರನ್ನು ಸೇರ್ಪಡೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.