×
Ad

ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ಆಗಮನ ಊಹಾಪೋಹ..!

Update: 2024-05-15 21:11 IST

ಪ್ರಜ್ವಲ್ ರೇವಣ್ಣ

ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನುವ ವಿಷಯ ನಿತ್ಯ ಹುಸಿಯಾಗುತ್ತಿದ್ದು, ಕೆಲವೊಂದು ವಿಮಾನ ಟಿಕೆಟ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇತ್ತೀಚಿಗೆ ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಅಥವಾ ಮಂಗಳೂರಿಗೆ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.ಅದೇ ರೀತಿ, ಬುಧವಾರವೂ ಪ್ರಜ್ವಲ್ ಜರ್ಮನಿಯ ಮ್ಯೂನಿಚ್ ಏರ್ ಪೋರ್ಟ್‍ನಿಂದ ಬೆಂಗಳೂರು ವಿಮಾನ ಹತ್ತಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಅವರು ವಿಮಾನ ಏರಿಲ್ಲ ಎಂಬ ವರದಿ ಬಂತು.

ಇದಕ್ಕೆ ಪೂರಕ ಎಂಬಂತೆ ಪ್ರಯಾಣದ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿತ್ತು. ಬೆಂಗಳೂರಿಗೆ ಪ್ರಜ್ವಲ್ ಬರುತ್ತಾರೆ ಎಂಬ ನಿರೀಕ್ಷೆಯನ್ನು ವಿಶೇಷ ತನಿಖಾ ತಂಡ ಸಹ ಹೊಂದಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಈಗ ಜರ್ಮನಿಯಿಂದ ಬೆಂಗಳೂರಿಗೆ ಟೇಕಾಫ್ ಆದ ಲುಫ್ತಾನ್ಸ್ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಇಲ್ಲ ಎಂಬ ಮಾಹಿತಿ ಬಂದಿದೆ.

ಇನ್ನೂ ವಿಮಾನ ಟಿಕೆಟ್‍ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಕಾಲಮಾನದಂತೆ ಬುಧವಾರ 3.30ಕ್ಕೆ ಮ್ಯೂನಿಚ್ ವಿಮಾನ ನಿಲ್ದಾಣದಿಂದ ವಿಮಾನ ಹೊರಟು ಮಧ್ಯರಾತ್ರಿ ಬೆಂಗಳೂರಿಗೆ ಬರಲಿದೆ. ಈ ವಿಮಾನದ ಟಿಕೆಟ್ ಅನ್ನು ಪ್ರಜ್ವಲ್‍ಗೆ ಕಾಯ್ದಿರಿಸಲಾಗಿತ್ತು. ಆದರೆ, ನಂತರ ಟಿಕೆಟ್ ಬುಕ್ಕಿಂಗ್ ರದ್ದು ಮಾಡಿರುವುದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News