×
Ad

ಕ್ರೆಡಾಯ್ ಬೆಂಗಳೂರು ಅಧ್ಯಕ್ಷರಾಗಿ ಝಾಯೆದ್ ನೌಮಾನ್ ನೇಮಕ

Update: 2025-04-15 23:35 IST

ಝಾಯೆದ್ ನೌಮಾನ್

ಬೆಂಗಳೂರು : ಮುಂದಿನ ಎರಡು ವರ್ಷಗಳ ಅವಧಿಗೆ ಕ್ರೆಡಾಯ್ ಬೆಂಗಳೂರು ಸಂಘಕ್ಕೆ ನೂತನ ಅಧ್ಯಕ್ಷರಾಗಿ ಝಾಯೆದ್ ನೌಮಾನ್ ಅವರು ನೇಮಕವಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅಮರ್ ಮೈಸೂರು ಕಾಲಾವಧಿ ಮುಕ್ತಾಯವಾಗಿದ್ದು, ಆ ಸ್ಥಾನವನ್ನು ಝಾಯೆದ್ ನೌಮಾನ್ ಅಲಂಕರಿಸಲಿದ್ದಾರೆ.

ಝಾಯೆದ್‌ ಅವರು ಪ್ರೆಸ್ಟೀಜ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಕಾರ್ಪೊರೇಟ್ ಹಣಕಾಸು, ವ್ಯವಹಾರ ಅಭಿವೃದ್ಧಿ ಮತ್ತು ಕಾರ್ಯತಂತ್ರ ಕ್ಷೇತ್ರಗಳ ಜವಾಬ್ದಾರಿ ಹೊಂದಿದ್ದಾರೆ. ಝಾಯೆದ್, ಕ್ರೆಡಾಯ್ ಬೆಂಗಳೂರು ಸಂಘದ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದಾರೆ.

ಉಪಾಧ್ಯಕ್ಷರಾಗಿ ಕರಣ್ ಆರ್.ಶೆಟ್ಟಿ(ಆರ್‌ಜೆ ಗ್ರೂಪ್‌ನಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ಕಾರ್ಯದರ್ಶಿಯಾಗಿ ನಿಶ್ಚಯ್ ಜೈಶಂಕರ್ (ಆದರ್ಶ್ ಗ್ರೂಪ್‌ನ ಉಪ ವ್ಯವಸ್ಥಾಪಕ ನಿರ್ದೇಶಕರು), ಖಜಾಂಚಿಯಾಗಿ ಶಿವರಾಮ್ ಕುಮಾರ್ ಮಲಕಲ, ಜಂಟಿ ಕಾರ್ಯದರ್ಶಿ ಅಭಿಷೇಕ್ ಅಹುಜ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News