ವಿಪ್ರೋ ಮ್ಯಾರಥಾನ್‍ನಲ್ಲಿ ಇತಿಹಾಸ ನಿರ್ಮಿಸಿದ ‘ಅಥ್ಲೇಟ್ ಅನ್ಲೀಷ್ಡ್’

Update: 2023-10-08 18:25 GMT

ಬೆಂಗಳೂರು: ವಿಪ್ರೋ ವತಿಯಿಂದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ‘ಅಥ್ಲೇಟ್ ಅನ್ಲೀಷ್ಡ್’’ ಎಂಬ ವಿಕಲಚೇತನರ ಮ್ಯಾರಾಥನ್ ಅನ್ನು ರವಿವಾರದು ಆಯೋಜಿಸಲಾಗಿತ್ತು. ಇದರಲ್ಲಿ 18 ವಿಕಲಚೇತನರು 5 ಕಿ.ಮೀ ದೂರ ಓಡಿದರು.

ಮ್ಯಾರಾಥನ್‍ಗೆ ಚಾಲನೆ ನೀಡಿದ ದೇಶದ ಮೊದಲ ಮಹಿಳಾ ಪ್ಯಾರಾಲಿಂಪಿಕ್ಸ್ ಅಥ್ಲೇಟ್ ದೀಪಾ ಮಲಿಕ್, ಅಡೆತಡೆಗಳನ್ನು ಮೆಟ್ಟಿನಿಲ್ಲುವ ಮತ್ತು ವಿಕಲಚೇತನರಿಗೆ ತಂತ್ರಜ್ಞಾನ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವ ಪರಿವರ್ತಕ ಶಕ್ತಿಯನ್ನು ‘ಅಥ್ಲೇಟ್ ಅನ್ಲೀಷ್ಡ್’’ ಹೊಂದಿದೆ. ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷಳಾಗಿ ವಿಕಲಚೇತನರ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಮತ್ತು ಅವರನ್ನು ಸಬಲೀಕರಣಗೊಳಿಸುವ ಅಚಲ ಬದ್ಧತೆಯನ್ನು ಹೊಂದಿರುವ ಅಸಿಸ್‍ಟೆಕ್ ಫೌಂಡೇಶನ್ ಮತ್ತು ವಿಪ್ರೋವನ್ನು ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ ಎಂದರು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಲು ಭಾರತೀಯ ತಂಡವು ತಯಾರಿ ನಡೆಸುತ್ತಿರುವಾಗ, ಈ ರೀತಿಯ ಕಾರ್ಯಕ್ರಮಗಳು ಕೇವಲ ಮೈಲಿಗಲ್ಲುಗಳಿಗಿಂತ ಹೆಚ್ಚಿನದಾಗಿರುತ್ತವೆ. ಪ್ರತಿಭೆಯನ್ನು ಪೋಷಿಸುವ, ಅಡೆತಡೆಗಳನ್ನು ಮೆಟ್ಟಿನಿಲ್ಲುವ ಮತ್ತು ಪ್ರತಿಯೊಬ್ಬ ಭಾರತೀಯ ಕ್ರೀಡಾಪಟು, ಸಾಮಥ್ರ್ಯವನ್ನು ಲೆಕ್ಕಿಸದೆ ಜಾಗತಿಕ ವೇದಿಕೆಯಲ್ಲಿ ಮಿಂಚುವ ಭವಿಷ್ಯವನ್ನು ಸೃಷ್ಟಿಸುವ ನಮ್ಮ ಸಮರ್ಪಣೆಗೆ ಅವು ಉದಾಹರಣೆಯಾಗಿವೆ ಎಂದು ಅವರು ಹೇಳಿದರು.

 

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News