×
Ad

ಬೆಂಗಳೂರು | ಹೊಸ ವರ್ಷಾಚರಣೆ ವೇಳೆ ಯುವತಿಗೆ ಕಿರುಕುಳ ಆರೋಪ: ಎಫ್‍ಐಆರ್ ದಾಖಲು

Update: 2025-01-01 18:41 IST

ಬೆಂಗಳೂರು: ಹೊಸ ವರ್ಷಾಚರಣೆಗೆ ಸ್ನೇಹಿತನೊಂದಿಗೆ ಪಬ್‍ಗೆ ತೆರಳಿದ್ದ ಯುವತಿಯನ್ನು ಗುರಿಯಾಗಿಸಿಕೊಂಡು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಆರೋಪದಡಿ ಇಲ್ಲಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮಂಗಳವಾರ ತಡರಾತ್ರಿ ಕಾಡುಬೀಸನಹಳ್ಳಿಯ ಪಬ್‍ನಲ್ಲಿ ಘಟನೆ ನಡೆದಿದ್ದು, ಸ್ನೇಹಿತನೊಂದಿಗೆ ರಾತ್ರಿ ಪಬ್‍ಗೆ ಬಂದಿದ್ದ ಯುವತಿಯನ್ನ ಅಪರಿಚಿತನೋರ್ವ ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ, ಸ್ಥಳದಲ್ಲೇ ಯುವತಿ ಕಿರುಚಿಕೊಂಡು ಪ್ರತಿರೋಧವೊಡ್ಡಿದ್ದಾರೆ. ಅಷ್ಟರಲ್ಲಾಗಲೇ ಸ್ಥಳದಿಂದ ಆರೋಪಿ ಕಾಲ್ಕಿತ್ತಿದ್ದಾನೆ. ಘಟನೆಯ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಪಬ್‍ನ ಸಿಸಿಟಿವಿ ದೃಶ್ಯಗಳನ್ನ ಸಂಗ್ರಹಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News