ಬೆಳಗಾವಿ: ವಿಷಾಹಾರ ಸೇವಿಸಿ 20 ಪೊಲೀಸರು ಅಸ್ವಸ್ಥ
Update: 2025-06-16 22:50 IST
ಬೆಳಗಾವಿ: ವಿಷಾಹಾರ ಸೇವನೆಯಿಂದ 20 ಪೊಲೀಸರ ಆರೋಗ್ಯದಲ್ಲಿ ಏರುಪೇರಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ.
ರವಿವಾರ ರಾತ್ರಿ ಊಟದ ಬಳಿಕ 20 ಪೊಲೀಸ್ ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಊಟ ಸೇವಿಸಿದ ಬಳಿಕ ಪೊಲೀಸ್ ಸಿಬ್ಬಂದಿಗೆ ಹೊಟ್ಟೆ ನೋವು, ವಾಂತಿಬೇಧಿ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಅವರನ್ನು ಖಾನಾಪುರ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆ ಮುಂದುವರೆದಿದೆ.
ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.