×
Ad

ಬೆಳಗಾವಿ | ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

Update: 2025-01-15 23:37 IST

ಬಂಧಿತ ಆರೋಪಿಗಳು

ಬೆಳಗಾವಿ : ಇಲ್ಲಿನ ರಾಯಬಾಗ ತಾಲೂಕಿನ ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಅತ್ಯಾಚಾರದ ವಿಡಿಯೊ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಭಿಷೇಕ ಬಾಳಪ್ಪ ಬೆವನೂರು, ಆದಿಲ್ ಷಾ ಶಬ್ಬೀರ್‌ ಜಮಾದಾರ ಮತ್ತು ಕೌತುಕ್‌ ಬಾನು ಬಡಿಗೇರ ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, ʼಅಭಿಷೇಕ ಎಂಬಾತ ಇನ್‌ಸ್ಟಾಗ್ರಾಂ ಮೂಲಕ ಒಬ್ಬ ಬಾಲಕಿಯ ಪರಿಚಯ ಮಾಡಿಕೊಂಡಿದ್ದ. ಮೆಸೇಜುಗಳಿಗೆ ಪ್ರತಿಕ್ರಿಯಿಸಿದ್ದ ಬಾಲಕಿ, ಆರೋಪಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಜ. 3ರಂದು ಅಥಣಿ ತಾಲ್ಲೂಕಿನ ಕೊಕಟನೂರು ಜಾತ್ರೆಯಲ್ಲಿ ಭೇಟಿಯಾಗಿದ್ದರು. ಎರಡನೇ ಭೇಟಿಗೆ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಬರಲು ಅಭಿಷೇಕ ಆಹ್ವಾನಿಸಿದ್ದ. ಆಗ ಬಾಲಕಿ, ಸಹಪಾಠಿಯಾಗಿದ್ದ ಇನ್ನೊಬ್ಬ ಬಾಲಕಿಯನ್ನೂ ಕರೆ ತಂದಿದ್ದಳು. ಅಭಿಷೇಕ ಕೂಡಾ ಸ್ನೇಹಿತರಾದ ಆದಿಲ್ ಷಾ ಮತ್ತು ಕೌತುಕ್‌ನನ್ನು ಕರೆದುಕೊಂಡು ಬಂದಿದ್ದ. ಕಾರಿನಲ್ಲಿ ಎಲ್ಲರೂ ಪ್ರಯಾಣಿಸಿದ್ದರು. ಸವಸುದ್ದಿ ಹೊರವಲಯದ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಿದ್ದರು. ಅಭಿಷೇಕ ಮತ್ತು ಆದಿಲ್‌ ಷಾ ಸೇರಿ ಒಬ್ಬ ಬಾಲಕಿ ಮೇಲೆ, ಕೌತುಕ್‌ ಕಾರಿನಲ್ಲೇ ಇನ್ನೊಬ್ಬಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆʼ ಎಂದು ತಿಳಿಸಿದರು.

‘ಅತ್ಯಾಚಾರ ಕೃತ್ಯದ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ವಿಡಿಯೊ ತೋರಿಸಿ ಪದೇಪದೇ ಬರುವಂತೆ ಬೆದರಿಕೆ ಒಡ್ಡುತ್ತಿದ್ದರು.ಇದರಿಂದ ಹೆದರಿದ ಒಬ್ಬ ಬಾಲಕಿ ಜ.13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದರು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News