×
Ad

ಬೆಳಗಾವಿ | ಫೈನಾನ್ಸ್ ಕಿರುಕುಳ ಆರೋಪ : ಮಹಿಳೆ ಬಲಿ

Update: 2025-01-23 18:54 IST

ಬೆಳಗಾವಿ : ಫೈನಾನ್ಸ್ ಕಂಪೆನಿಯೊಂದರ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಯಮನಾಪುರ ಹೊರವಲಯದಲ್ಲಿ ವರದಿಯಾಗಿದೆ.

ಇಲ್ಲಿನ ಹುಕ್ಕೇರಿ ತಾಲೂಕಿನ ಶಿರೂರಿನ ಸರೋಜಾ ಕಿರಬಿ(52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಪ್ಪ ದಡ್ಡಿ ಎಂಬಾತ ಫೈನಾನ್ಸ್‌ ನಲ್ಲಿ ಸಬ್ಸಿಡಿ ಅಡಿಯಲ್ಲಿ 2.30 ಲಕ್ಷ ರೂ. ಸಾಲವನ್ನು ಸರೋಜಾ ಕಿರಬಿ ಅವರಿಗೆ ಕೊಡಿಸಿದ್ದ. ಈ ವೇಳೆ ಅರ್ಧದಷ್ಟು ಹಣ ನನಗೆ ಕೊಟ್ಟರೆ ಸಾಲವನ್ನು ತಾನೇ ಪಾವತಿ ಮಾಡುವುದಾಗಿ ನಂಬಿಸಿದ್ದ. ಆತನ ನಂಬಿ ಸಾಲ ಪಡೆದು ಅರ್ಧದಷ್ಟು ಹಣವನ್ನು ಸರೋಜಾ ಪಾವತಿ ಮಾಡಿದ್ದರು. ಆದರೂ, ಫೈನಾನ್ಸ್‌ ನಿಂದ ಪೂರ್ತಿ ಸಾಲ ಕಟ್ಟಲು ಸೂಚಿಸಲಾಗಿತ್ತು ಎನ್ನಲಾಗಿದೆ.

ಈ ವೇಳೆ ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದಿದ್ದ ಸರೋಜಾ, ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಪಾವತಿಸುವಂತೆ ನಿತ್ಯ ಕಿರುಕುಳ ನೀಡಲಾಗುತಿತ್ತು ಎಂದು ಹೇಳಲಾಗುತ್ತಿದೆ. ಇದರಿಂದ ಬುಧವಾರ(ಜ.22) ಬೇಸತ್ತು ಬಾವಿಗೆ ಹಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಫೈನಾನ್ಸ್ ಹಾಗೂ ಹೊಳೆಪ್ಪ ದಡ್ಡಿ ವಿರುದ್ಧ ಮೊಕದ್ದಮೆ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News