×
Ad

Belagavi | ಉಸಿರುಗಟ್ಟಿ ಮೂವರು ಯುವಕರು ಮೃತ್ಯು; ಓರ್ವನ ಸ್ಥಿತಿ ಗಂಭೀರ

ಕೋಣೆಯಲ್ಲಿ ಬೆಚ್ಚಗಿರಲು ಇದ್ದಿಲಿಗೆ ಬೆಂಕಿ ಹಾಕಿ ಮಲಗಿದ್ದ ಯುವಕರು

Update: 2025-11-18 20:24 IST

ಬೆಳಗಾವಿ : ಬೆಳಗಾವಿ ನಗರದ ಅಮ್ನ ನಗರದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಚಳಿಯಿಂದ ರಕ್ಷಣೆ ಪಡೆಯಲು ಕೋಣೆಯಲ್ಲಿ ಇದ್ದಿಲಿನ ಬೆಂಕಿ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕನ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ರಿಹಾನ್ (22), ಮೋಹಿನ್ ನಾಲಬಂದ (23), ಮತ್ತು ಸರ್ಫರಾಜ್ ಹರಪ್ಪನಹಳ್ಳಿ (22) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ಶಾಹನವಾಜ್ (19) ಎಂದು ಗೊತ್ತಾಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಮರಳಿದ್ದ ನಾಲ್ವರು ಯುವಕರು, ಬೆಳಗಾವಿಯಲ್ಲಿ ಹೆಚ್ಚಾಗಿದ್ದ ಚಳಿಯಿಂದಾಗಿ ತಮ್ಮ ಕೋಣೆಯಲ್ಲಿ ಬೆಚ್ಚಗಿರಲು ಇದ್ದಿಲು ಕಾಯಿಸಿ ಬೆಂಕಿ ಇಟ್ಟುಕೊಂಡು ಮಲಗಿದ್ದರು. ನಿದ್ರೆಗೆ ಜಾರಿದ ಬಳಿಕ, ಕೋಣೆಯೊಳಗೆ ಹೊಗೆ ತುಂಬಿಕೊಂಡು ಆಮ್ಲಜನಕದ ಕೊರತೆಯಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮವಾಗಿ, ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬಾತ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಾಳಮಾರುತಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಶಾಸಕ ಆಸೀಫ್ ಸೇಠ್ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News