ಬೆಳಗಾವಿ | ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನ
ಮಾಲೀಕ ಕಿರುಚುತ್ತಿದ್ದಂತೆ ಪರಾರಿಯಾದ ದುಷ್ಕರ್ಮಿಗಳು
Update: 2025-08-26 18:38 IST
ಬೆಳಗಾವಿ : ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ
ಪಟ್ಟಣದ ತ್ರಿಮೂರ್ತಿ ಜ್ಯುವೆಲ್ಸ್ ಅಂಗಡಿಗೆ ಇಬ್ಬರು ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಗನ್ ತೋರಿಸಿ ದರೋಡೆಗೆ ಯತ್ನಿಸಿದ್ದಾರೆ.
ಈ ವೇಳೆ ಅಂಗಡಿ ಮಾಲೀಕ ಮಹೇಶ್ ಪೋತದಾರ ಧೈರ್ಯದಿಂದ ಕಿರುಚಿಕೊಂಡು ನೆರವು ಕೋರಿದ ಕಾರಣ ದುಷ್ಕರ್ಮಿಗಳು ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.