×
Ad

ಬೆಳಗಾವಿ | ಲಾರಿ ಢಿಕ್ಕಿ: ಬೈಕ್ ಸವಾರರಿಬ್ಬರು ಮೃತ್ಯು

Update: 2025-06-16 11:25 IST

ಬೆಳಗಾವಿ: ಸಿಮೆಂಟ್ ಸಾಗಾಟದ ಲಾರಿ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಿಪ್ಪಾಣಿ-ಮುಧೂಳ ರಾಜ್ಯ ಹೆದ್ದಾರಿಯ ಮೂಡಲಗಿ ತಾಲೂಕಿನ ಗುರ್ಲಾಪುರ್ ಕ್ರಾಸ್ ನಲ್ಲಿ ರವಿವಾರ ಸಂಭವಿಸಿದೆ.

ಮೃತರನ್ನು ಪಟ್ಟಣದ ಕಜ್ಜಾಳ ಮಡ್ಡಿ ನಿವಾಸಿ ಶ್ರೀಶೈಲ ಹಾದಿಮನಿ (36) ಹಾಗೂ ರಂಗಾಪುರ ಗ್ರಾಮದ ಸಂಜು ಮಾರಾಪುರ (38) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News