×
Ad

ಬೆಳಗಾವಿ: ಬಿಮ್ಸ್ ನಲ್ಲಿ ಬಾಣಂತಿ ಮೃತ್ಯು; ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಪ್ರಕರಣ

Update: 2025-02-02 11:15 IST

ಬೆಳಗಾವಿ: ತಾಲೂಕಿನಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಇನ್ನೊಬ್ಬರು  ಬಾಣಂತಿ ಮೃತಪಟ್ಟ  ಘಟನೆ ವರದಿಯಾಗಿದೆ.

ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಗಂಗವ್ವ ಗೊಂಡಕುಂದ್ರಿ (31) ಮೃತ ಮಹಿಳೆ. ಜ. 28 ರಂದು ಹೆರಿಗೆಗಾಗಿ ಬಿಮ್ಸ್‌ಗೆ ದಾಖಲಾಗಿದ್ದ ಇವರು ಜ.31 ಕ್ಕೆ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮನೀಡಿದ್ದರು. 

ಮಗು ಆರೋಗ್ಯವಾಗಿದ್ದು, ಬಿಪಿ ಕಡಿಮೆಯಾದ ಕಾರಣ ಗಂಗವ್ವ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಗಂಗವ್ವ ಕರಡಿಗುದ್ದಿಯ ಲಕ್ಕಪ್ಪ ಜೊತೆ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. 12 ವರ್ಷಗಳ ಬಳಿಕ ಗರ್ಭಿಣಿ ಆಗಿದ್ದ ಗಂಗವ್ವ ಹೆರಿಗೆ ಬಳಿಕ ಮೃತಪಟ್ಟಿದ್ದಾರೆ.

ನಾಲ್ಕು ದಿನಗಳ ಹಿಂದೆ ನಿಲಜಿ ಗ್ರಾಮದ ಅಂಜಲಿ ಪಾಟೀಲ ಎಂಬ ಬಾಣಂತಿ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News