×
Ad

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿದರೆ ದಲಿತರು ಸಿಎಂ ಆಗಬೇಕು :‌ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ

Update: 2025-12-11 12:21 IST

ಬೆಳಗಾವಿ: ಒಂದು ವೇಳೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿದರೆ ದಲಿತರು ಸಿಎಂ ಆಗಬೇಕು ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೊಸ ಬೇಡಿಕೆಯನ್ನಿಟ್ಟಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ನಾಲ್ಕೈದು ನಾಯಕರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಎಚ್ ಸಿ ಮಹದೇವಪ್ಪ, ಮುನಿಯಪ್ಪ, ಸತೀಶ ಜಾರಕಿಹೊಳಿ ಇದ್ದಾರೆ. ಇವರಲ್ಲಿ ಯಾರೇ ಸಿಎಂ ಆದರೂ ನಮಗೆ ಸಂತೋಷ ಎಂದರು.

ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆದರೆ ನಮ್ಮ ಅಭ್ಯಂತರ ಏನೂ ಇಲ್ಲ. ವಾಲ್ಮೀಕಿ‌ ಸಮಾಜದ ಶಾಸಕರು, ಹಾಗೂ ಸಮಾಜ ಸಿದ್ದರಾಮಯ್ಯ ಬೆನ್ನಿಗೆ ಇರಲಿದೆ ಎಂದು ಹೇಳಿದರು.

ಪ್ರತಿ ವರ್ಷದಂತೆ  ಮಠದ ವತಿಯಿಂದ ವಾಲ್ಮೀಕಿ ಜಯಂತಿ‌ ಮಾಡುತ್ತೇವೆ. ಹೀಗಾಗಿ ಸತೀಶ ಜಾರಕಿಹೊಳಿ ಸಭೆಗೆ ಬಂದಿದ್ದರು. ಇಂದು ಮಧ್ಯಾಹ್ನ ಸಿಎಂ ಅವರನ್ನು ಜಾತ್ರೆಗೆ ಆಮಂತ್ರಿಸಲು ಹೋಗತ್ತಿದ್ದೇವೆ. ಆಗ ನಮ್ಮ ಸಮುದಾಯಕ್ಕೆ ಎರಡು ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News