×
Ad

ಮಹಾರಾಷ್ಟ್ರ: ದೋಣಿ ಮಗುಚಿ ಮಕ್ಕಳ ಸಹಿತ ಆರು ಮಂದಿ ನೀರುಪಾಲು

Update: 2024-05-22 12:52 IST

ಬೆಳಗಾವಿ:  ಭಾರಿ ಗಾಳಿ ಬೀಸಿದ ಪರಿಣಾಮ ದೋಣಿ ಮಗುಚಿ ಭೀಕರ ಅವಘಡ ಸಂಭವಿಸಿದ್ದು ಇಬ್ಬರು ಮಕ್ಕಳ ಸಹಿತ ಆರು ಮಂದಿ ನೀರು ಪಾಲಾಗಿರುವ ಘಟನೆ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ನಡೆದಿದೆ.

ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ, ಗೋಕುಲ್ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ಮೃತಪಟ್ಟವರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ  ದೋಣಿ ವಿಹಾರಕ್ಕೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. 

ಮೃತದೇಹ ಹುಡುಕಾಟಕ್ಕೆ ಅಗ್ನಿಶಾಮಕ ದಳ, ಎನ್ ಡಿ ಆರ್ ಎಫ್ ಸಿಬ್ಬಂದಿ  ಆಗಮಿಸಿದ್ದು, ಸ್ಥಳೀಯ ಪೊಲೀಸರ ಸಹಾಯದೊಂದಿಗೆ   ಅಗ್ನಿಶಾಮಕ ದಳದ  ಹುಡುಕಾಟ ಮುಂದುವರೆದಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News