×
Ad

ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಸಿಎಂ ಸ್ಥಾನ ಕೇಳುತ್ತೇನೆ : ಸಚಿವ ಸತೀಶ್ ಜಾರಕಿಹೊಳಿ

Update: 2024-06-29 18:53 IST

ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮುಗಿದು ಹೋಗಿರುವ ಅಧ್ಯಾಯ. 2028ರ ವಿಧಾನಸಭಾ ಚುನಾವಣೆ ಬಳಿಕ ಪರಿಸ್ಥಿತಿ ನೋಡಿಕೊಂಡು ನಾನು ಸಿಎಂ ಸ್ಥಾನ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಎಂ ಸ್ಥಾನದ ವಿಚಾರ ಮುಗಿದು ಹೋಗಿದೆ. ಅದನ್ನೇ ಪುನರಾವರ್ತನೆ ಮಾಡುವುದರಲ್ಲಿ ಅವಶ್ಯಕತೆ ಇಲ್ಲ. ದಿಲ್ಲಿ, ಬೆಂಗಳೂರಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಆದರೂ, ದಿನವೂ ಅದನ್ನೇ ಮುಂದುವರೆಸುವುದು ಅಗತ್ಯವಿಲ್ಲ ಎಂದರು.

‘ವೈಯಕ್ತಿಕವಾಗಿ ಹೇಳಿಕೆ ನೀಡಿದರೆ ಮಹತ್ವ ಇಲ್ಲ, ಸಿಎಂ ಬದಲಾವಣೆಯು ಮುಗಿದು ಹೋದ ಅಧ್ಯಾಯ. ಅದನ್ನು ರಸ್ತೆಯಲ್ಲಿ ಚರ್ಚೆ ಮಾಡಲು ಆಗುವುದಿಲ್ಲ. ಪಕ್ಷದ ಹೈಕಮಾಂಡ್ ಇದೆ, ಅವರ ತೀರ್ಮಾನ. ಯಾರೋ, ಎಲ್ಲೋ ಮಾಡಲು ಆಗುವುದಿಲ್ಲ. ಶಾಸಕಾಂಗ ಪಕ್ಷವಿದೆ. ಅಲ್ಲಿಯೇ ಚರ್ಚೆ ಆಗಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News