×
Ad

ಪ್ರಧಾನಿ ʼನಾಗಮಂಗಲ ಗಲಾಟೆʼ ವಿಚಾರವನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದು ಸರಿಯಲ್ಲ : ಸತೀಶ್ ಜಾರಕಿಹೊಳಿ

Update: 2024-09-15 18:24 IST

ಬೆಳಗಾವಿ : ನಾಗಮಂಗಲ ಗಲಾಟೆ ವಿಚಾರವನ್ನು ಮೋದಿ ತಮ್ಮ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದು ಸರಿಯಲ್ಲ. ಪ್ರಧಾನಿಯವರಿಗೆ ಅದನ್ನು ಬಿಟ್ಟರೆ ಬೇರೆ ಏನು ಹೇಳುವುದಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆಕ್ಷೇಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 60 ಸಾವಿರ ಗಣೇಶಮೂರ್ತಿಗಳ ಪ್ರತಿಷ್ಠಾಪನೆ ಆಗಿವೆ. ಎಲ್ಲೋ ಒಂದು ಕಡೆ ಆಕಸ್ಮಿಕವಾಗಿ ಗಲಾಟೆ ಆಗಿರಬಹುದು. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಬಂಧನ, ಏಕೆ ಬಂಧನ ಮಾಡಿದ್ದಾರೆಂದು ನೀವು ಬೆಂಗಳೂರಿನವರನ್ನೇ ಕೇಳಬೇಕು. ಸಿಕ್ಕ ಸಿಕ್ಕ ಹಾಗೆ ಯಾರು ಅವರಿಗೆ ಬಾಯಿಗೆ ಬಂದಂತೆ ಬೈಯುವಂತೆ ಯಾರು ಹೇಳಿದ್ದರು. ಕಾಂಗ್ರೆಸ್‍ನವರು ಹೇಳಿದ್ರಾ? ಬಿಜೆಪಿಯವರು ಹೇಳಿದ್ರಾ? ಜೆಡಿಎಸ್‍ನವರು ಹೇಳಿದ್ರಾ. ಪ್ರಕರಣ ದಾಖಲಾದ ಬಳಿಕ ಬಂಧನ ಮಾಡಿಲ್ಲ ಎಂದರೆ ಏಕೆ ಬಂಧಿಸಿಲ್ಲ ಎಂದು ಹೇಳ್ತಾರೆ. ಬಂಧನ ಮಾಡಿದರೆ ಈ ರೀತಿ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News