ಕುರ್‌ಆನ್ ಸುಟ್ಟು ಹಾಕಿದ್ದ ಪ್ರಕರಣ | ಶೀಘ್ರದಲ್ಲಿಯೇ ದುಷ್ಕರ್ಮಿಗಳ ಬಂಧನ : ಸಚಿವ ಸತೀಶ್ ಜಾರಕಿಹೊಳಿ
Update: 2025-05-13 19:14 IST
ಸತೀಶ್ ಜಾರಕಿಹೊಳಿ
ಬೆಂಗಳೂರು : ಬೆಳಗಾವಿಯ ಸಂತಿ ಬಸ್ತವಾಡ ಗ್ರಾಮದಲ್ಲಿ ಮಸೀದಿಯಿಂದ ಕುರ್‌ಆನ್ ಹಾಗೂ ಹದೀಸ್ ಕದ್ದು ಸುಟ್ಟು ಹಾಕಿದ್ದ ಪ್ರಕರಣ ಸಂಬಂಧ ಈಗಾಗಲೇ ಸುವೋ ಮೊಟೋ ಕೇಸ್ ದಾಖಲು ಮಾಡಲಾಗಿದ್ದು, ಶೀಘ್ರದಲ್ಲಿಯೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಮುದಾಯದ ಧರ್ಮಗ್ರಂಥ ಸುಟ್ಟ ವಿಚಾರಕ್ಕೆ, ಸುವೋ ಮೊಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಈ ರೀತಿಯ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದರು.
ಅದೇ ರೀತಿ, ನಗರದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ಅವರು ಉಲ್ಲೇಖಿಸಿದರು.