ಬಳ್ಳಾರಿ | ಮಹಿಳೆಯ ಮೃತ ದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ
Update: 2026-01-02 22:24 IST
ಸಾಂದರ್ಭಿಕ ಚಿತ್ರ
ಬಳ್ಳಾರಿ, ಜ. 2: ನಗರದ ಸತ್ಯಂ ಕಾಲೇಜಿನ ಮುಂಭಾಗದಲ್ಲಿ ಎಚ್‌ಎಲ್ಸಿ ಉಪ ಕಾಲುವೆಯಲ್ಲಿ ಸುಮಾರು 60ರಿಂದ 65 ವರ್ಷದ ಮೃತ ಮಹಿಳೆಯೊಬ್ಬರ ಮೃತದೇಹ ಜ.2ರಂದು ತೇಲಿಕೊಂಡು ಬಂದಿದ್ದು, ವಾರಸುದಾರರ ಪತ್ತೆಗೆ ಸಹರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು: ಎತ್ತರ ಅಂದಾಜು 5.4 ಅಡಿ, ಕೆಂಪು ಮೈಬಣ್ಣ, ದುಂಡು ಮುಖ, ಹಸಿರು ಬಣ್ಣದ ಸೀರೆ ಮತ್ತು ಕಪ್ಪು ಬಣ್ಣದ ಕುಪ್ಪಸ, ಎರಡು ಕೈಗಳಿಗೆ ಹಸಿರು ಬಳೆ ಧರಿಸಿರುತ್ತಾರೆ.
ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392258100 ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ದೂ.08392-276461 ಹಾಗೂ ಮೊ.9480803049 ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.