×
Ad

ಬಳ್ಳಾರಿ | ಸಿರುಗುಪ್ಪ ತಾಲೂಕಿನಲ್ಲಿ ಬಿಜೆಪಿಯಿಂದ ಜನಜಾಗೃತಿ ಪಾದಯಾತ್ರೆ

Update: 2026-03-05 23:43 IST

ಬಳ್ಳಾರಿ/ ಸಿರುಗುಪ್ಪ: ತಾಲೂಕಿನ ಹಚ್ಚೊಳ್ಳಿ ಹಾಗೂ ಅಗಸನೂರು ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಘಟಕದ ವತಿಯಿಂದ “ವಿಕಸಿತ ಭಾರತ” ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಕುರಿತು ಜನಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

ಈ ಪಾದಯಾತ್ರೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು, ಸಿರುಗುಪ್ಪ ತಾಲೂಕು ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಸ್ವಾಮಿ, ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ದರಪ್ಪ ನಾಯಕ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ರೈತ ಮೋರ್ಚಾ ಅಧ್ಯಕ್ಷ ವೀರನಗೌಡ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಚ್ಚೊಳ್ಳಿ ಗ್ರಾಮದ ಬಸ್ ನಿಲ್ದಾಣದಿಂದ ಮಾರೆಮ್ಮ ದೇವಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು. ಅಗಸನೂರು ಗ್ರಾಮದಲ್ಲಿ ಜಗನ್ನಾಥ್ ರೆಡ್ಡಿ ಅವರ ಮನೆಯಿಂದ ಶೇಷಮ್ಮ ಕಟ್ಟೆವರೆಗೆ ಜನಜಾಗೃತಿ ಪಾದಯಾತ್ರೆ ನಡೆಸಲಾಯಿತು.

ಈ ಪಾದಯಾತ್ರೆಯಲ್ಲಿ ಎಂ.ಆರ್. ಗೌಡ, ಎಂ. ವೀರೇಶ್, ಶಿವರಾಮಗೌಡ, ದೊಡ್ಡ ಹುಲಗಪ್ಪ, ಹನುಮಂತರೆಡ್ಡಿ, ಶೇಖರಗೌಡ, ಸಿದ್ದಯ್ಯ ಸ್ವಾಮಿ, ಶರಣಬಸವ, ವೀರೇಂದ್ರ, ಅಯ್ಯಪ್ಪ, ರಾಮನಾಯಕ, ಚಿದಾನಂದಗೌಡ, ಮೋಹನ್ ರೆಡ್ಡಿ, ಮಹಾದೇವಪ್ಪ, ರಾಮಕೃಷ್ಣ, ಬಸವರಾಜ, ಚನ್ನಬಸವನಗೌಡ, ಕುಮಾರಪ್ಪ, ನಾಗರಾಜ, ವೀರೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News