Bengaluru | ಯಶ್ ಹುಟ್ಟುಹಬ್ಬಕ್ಕೆ ಗಾಲ್ಫ್ ಕ್ಲಬ್ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್‍ಐಆರ್ ದಾಖಲು
Update: 2026-01-14 00:08 IST
ಬೆಂಗಳೂರು: ಚಿತ್ರನಟ ಯಶ್ ಹುಟ್ಟು ಹಬ್ಬಕ್ಕೆ ಗಾಲ್ಫ್ ಕ್ಲಬ್ ಮುಂದೆ ಬ್ಯಾನರ್ ಹಾಕಿದ್ದಕ್ಕೆ ವೇಣು ಕ್ರಿಯೇಶನ್ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಜ.8ರಂದು ನಟ ಯಶ್ ಹುಟ್ಟುಹಬ್ಬದ ಹಿನ್ನೆಲೆ ಗಾಲ್ಫ್ ಕ್ಲಬ್ ಮುಂದೆ ಅವರ ಮನೆಯ ಎದುರು ಶುಭಕೋರಿ ಹಲವು ಬ್ಯಾನರ್ ಗಳನ್ನು ಹಾಕಿಸಲಾಗಿತ್ತು. ಈ ಹಿನ್ನೆಲೆ ಜಿಬಿಎ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ವೇಣು ಕ್ರಿಯೇಶನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.