ಒಂದು ಕಿಮೀ ಉದ್ದದ ಕನ್ನಡ ಧ್ವಜ ಮೆರವಣಿಗೆ
Update: 2025-11-23 23:58 IST
ಬೆಂಗಳೂರು: ಉದ್ಭವ ಗಣಪತಿ ಗೆಳೆಯರ ಬಳಗ ಹಾಗೂ ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ನಗರದಲ್ಲಿ ಒಂದು ಕಿಲೋ ಮೀಟರ್ ಉದ್ದದ ‘ಕನ್ನಡ ಧ್ವಜ’ ಮೆರವಣಿಗೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ರವಿವಾರ ಪಟ್ಟೇಗಾರಪಾಳ್ಯ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಜನರು ‘ಕನ್ನಡ ಧ್ವಜ’ ಹಿಡಿದು ಪ್ರಶಾಂತ ನಗರದ ವರೆಗೆ ಕನ್ನಡದ ಘೋಷ ವಾಕ್ಯಗಳನ್ನು ಕೂಗುತ್ತಾ ಸಾಗಿದರು. ಇದೇ ವೇಳೆ, ಕನ್ನಡೇತರರಿಗೆ ಕನ್ನಡ ಕಲಿಕೆಗೆ ಪ್ರೋತ್ಸಾಯಿಸಿ, ಬಿತ್ತಿಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಿಯಕೃಷ್ಣ, ಉದ್ಭವ ಗಣಪತಿ ಗೆಳೆಯರ ಬಳಗ ಅಧ್ಯಕ್ಷ ಆರ್.ಮಂಜು, ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಉದ್ಭವ ಗಣಪತಿ ಗೆಳೆಯರ ಬಳಗದ ಸದಸ್ಯರಾದ ಪಾಪಣ್ಣ, ಮಹೇಶ್, ಜಮೀರ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.