×
Ad

ನಿಮಾನ್ಸ್ ಆಸ್ಪತ್ರೆಗೆ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‍ರ ಮೃತದೇಹ ಹಸ್ತಾಂತರ

Update: 2026-01-30 00:34 IST

ಬೆಂಗಳೂರು: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಸದಸ್ಯರು ಹಾಗೂ ಕಾರ್ಮಿಕ ಮುಖಂಡ ಅನಂತಸುಬ್ಬರಾವ್ ಅವರ ಕುಟುಂಬಸ್ಥರು ಹಿರಿಯ ಕಾರ್ಮಿಕ ಮುಖಂಡ ಎಚ್.ವಿ. ಅನಂತಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಇಲ್ಲಿನ ನಿಮಾನ್ಸ್ ಆಸ್ಪತ್ರೆಗೆ ಗುರುವಾರ ಹಸ್ತಾಂತರ ಮಾಡಿದ್ದಾರೆ.

‘ತಾನು ಸತ್ತ ನಂತರ ತಮ್ಮ ಇಡೀ ದೇಹವನ್ನು ದಾನಮಾಡಬೇಕು’ ಎಂದು ಅನಂತ್ ಸುಬ್ಬರಾವ್ ಅವರು ಹೇಳಿದ್ದರು. ಅವರ ಆಶಯದಂತೆ ಮೃತದೇಹವನ್ನು ನಿಮಾನ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹೋರಾಟಗಾರ ಅನಂತ್ ಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4ರ ವರೆಗೆ ವೈಯಾಲಿಕಾವಲ್‍ನ ಜಿಡಿ ಪಾರ್ಕ್ ಬಡಾವಣೆ ಸಿಪಿಐ ರಾಜ್ಯ ಕಚೇರಿ, ಘಾಟಿ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಪ್ರಿಯಕೃಷ್ಣ ಸೇರಿ ಹಲವರು ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News