ಬೀದರ್: ಅನ್ಯಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆ
ಬೀದರ್ : ಅನ್ಯಜಾತಿಯ ಹುಡುಗನನ್ನು ಪ್ರೀತಿಸುತಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಘಟನೆ ಔರಾದ್ ತಾಲ್ಲೂಕಿನ ಬಾರ್ಗೇನ್ ತಾಂಡಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಳೆದ ಕೆಲ ದಿನಗಳಿಂದ ಯುವತಿಯು ಪಕ್ಕದ ಹಳ್ಳಿಯ ಅನ್ಯಜಾತಿ ಹುಡುಗನನ್ನು ಪ್ರೀತಿಸುತಿದ್ದಳು ಎನ್ನಲಾಗಿದ್ದು, ಈ ವಿಷಯವು ಅವಳ ತಂದೆಗೆ ಗೊತ್ತಾಗಿತ್ತು. ಇದರಿಂದ ಸಿಟ್ಟಾಗಿದ್ದ ಆತನು ಪ್ರೀತಿಸುತ್ತಿರುವ ಯುವಕನಿಂದ ದೂರವಿರಲು ತನ್ನ ಮಗಳಿಗೆ ಹೇಳಿದ್ದನು. ಯುವತಿಯ ತಂದೆಯು ಬೇರೆ ನೆಂಟಸ್ತಿಕೆ ನೋಡಿದ್ದರು. ಆದರೆ ಇದಕ್ಕೆ ಒಪ್ಪದ ಯುವತಿ ಅದೇ ಹುಡುಗನನ್ನು ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ತಂದೆಯು, ಮನೆಯಲ್ಲೆ ಹಗ್ಗದಿಂದ ಕುತ್ತಿಗೆ ಬಿಗಿದು ನಂತರ ಕಟ್ಟಿಗೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ತಿಂಗಳ ಹಿಂದೆ ಹುಡುಗಿಯು ಬೇರೆ ಹುಡುಗನೊಂದಿಗೆ ಹೋಗಿರುತ್ತಾಳೆ. ಆವಾಗ ನಾವು ಅವಳನ್ನು ಹುಡುಕಿಕೊಂಡು ಬಂದು ಮನೆಯವರಿಗೆ ಒಪ್ಪಿಸಿದ್ದೇವೆ. ಅದಾದ ನಂತರ ನಿನ್ನೆ ತಂದೆ, ಮಗಳ ನಡುವೆ ಜಗಳ ನಡೆದಿದೆ. ಆ ಹುಡುಗನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳಲು ಹುಡುಗಿ ಒಪ್ಪಿರಲಿಲ್ಲ. ಇದರಿಂದಾಗಿ ಸಿಟ್ಟಾದ ತಂದೆಯು ಹುಡುಗಿಯನ್ನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಪ್ರದೀಪ್ ಗುಂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28