ಬೀದರ್: ಟ್ರ್ಯಾಕ್ಟರ್-ಬೈಕ್ ಢಿಕ್ಕಿ; ಸವಾರ ಮೃತ್ಯು
Update: 2025-03-07 10:54 IST
ಬೀದರ್: ಟ್ರ್ಯಾಕ್ಟರ್ ಮತ್ತು ಬೈಕ್ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ಹುಲಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಗಳಿ ಕ್ರಾಸ್ ಬಳಿ ನಡೆದಿದೆ.
ಪಂಜಾಬ್ ರಾಜ್ಯದ ಲೂಧಿಯಾನ ಜಿಲ್ಲೆಯ ನಿವಾಸಿ ಜಸ್ಪ್ರೀತ್ ಸಿಂಗ್ ಬಲಜೀತ್ ಸಿಂಗ್ (37) ಮೃತಪಟ್ಟ ವ್ಯಕ್ತಿ.
ರಾಶಿ ಮಾಡುವ ಯಂತ್ರದ ಚಾಲಕನಾಗಿದ್ದ ಈತ, ರಾತ್ರಿ ಶಹಾಜನಿ ಔರಾದ್ ಕಡೆಯಿಂದ ಹುಲಸೂರ ಕಡೆಗೆ ಬರುತ್ತಿದ್ದ. ಎದುರಿಗೆ ಬಂದ ಟ್ರ್ಯಾಕ್ಟರ್ ಗೆ ಈತನ ಬೈಕ್ ಢಿಕ್ಕಿಯಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.