ಹುಮನಾಬಾದ್, ಮಂಠಾಳ್ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಪೀಟ್ ಜೂಜಾಟದ ಅಡ್ಡೆಗೆ ದಾಳಿ : ಪ್ರಕರಣ ದಾಖಲು
ಬೀದರ್ : ಹುಮನಾಬಾದ್ ಹಾಗೂ ಮಂಠಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಸಾವಿರಾರು ರೂ. ನಗದು ಹಣ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಾಗಿದೆ.
ಎಸ್ಪಿ ಪ್ರದೀಪ್ ಅವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಮನಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಎ ಪಿ ಎಮ್ ಸಿ ಮಾರ್ಕೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಖಚಿತ ಮಾಹಿತಿ ಮೆರೆಗೆ ಪಿಎಸ್ಐ ಸುರೇಶಕುಮಾರ್ ಅವರು ತಮ್ಮ ಸಿಬ್ಬಂದಿರವರೊಂದಿಗೆ ದಾಳಿ ನಡೆಸಿದ್ದಾರೆ. ಜೂಜಾಟದಲ್ಲಿ ತೊಡಗಿಸಿದ 26,360 ರೂ. ವಶಕ್ಕೆ ಪಡೆದುಕೊಂಡು 10 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಾಗೆಯೇ ಮಂಠಾಳ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಠಾಳ್ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಮಾಹಿತಿ ಮೆರೆಗೆ ಪಿಎಸ್ಐ ಸುವರ್ಣಾ ಅವರು ತಮ್ಮ ಸಿಬ್ಬಂದಿ ಅವರೊಂದಿಗೆ ದಾಳಿ ನಡೆಸಿ 12,300 ರೂ. ವಶಕ್ಕೆ ಪಡಿಸಿಕೊಳ್ಳಲಾಗಿದ್ದು, ಜೂಜಾಟದಲ್ಲಿ ತೊಡಗಿದ್ದ 9 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.