×
Ad

ಬೀದರ್: ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ

Update: 2024-11-07 08:45 IST

ಬೀದರ್: ಮ‌ದ್ಯದ ಅಮಲಿನಲ್ಲಿದ್ದ ಕಾರ್ಮಿಕನೊಬ್ಬ ಪಾಲಕರಿಗೆ ವಿಡಿಯೋ ಕಾಲ್ ಮಾಡಿ ಲೈವ್'ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಸದಲಾಪೂರ ಗ್ರಾಮದಲ್ಲಿ ಜರುಗಿದೆ.

ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಡೋಬಲೆವಾಡಿ ಗ್ರಾಮದ‌ ನಿವಾಸಿ ಸಚಿನ ರಾಜಕುಮಾರ ಚವ್ಹಾಣ (32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕನಾಗಿದ್ದಾನೆ.

ಸುದ್ದಿ ತಿಳಿದ ಮುಡಬಿ ಠಾಣೆ ಪಿಎಸ್ಐ ಜಯಶ್ರೀ ಹೋಡಲ್ ನೇತೃತ್ವದ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಮುಡಬಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News