×
Ad

ಬೀದರ್ | ತ್ರಿಪೂರಾಂತದ ರಮಾಬಾಯಿ ಕಾಲೋನಿಯ ಮುಖ್ಯರಸ್ತೆ ಒತ್ತುವರಿ ಆರೋಪ; ಕ್ರಮಕ್ಕೆ ಆಗ್ರಹ

Update: 2025-03-11 20:47 IST

ಬೀದರ್ : ಬಸವಕಲ್ಯಾಣ ನಗರದ ತ್ರಿಪೂರಾಂತದಲ್ಲಿರುವ ರಮಾಬಾಯಿ ಕಾಲೋನಿಯ ಮುಖ್ಯರಸ್ತೆಯನ್ನು ನಗರ ಸಭೆ ಉಪಾಧ್ಯಕ್ಷರ ಪತಿ ಸೇರಿ ಹಲವರು ಅನಧಿಕೃತವಾಗಿ ವಶಕ್ಕೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಕಾಲೋನಿಯ ಜನ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇಂದು ಬಸವಕಲ್ಯಾಣ ನಗರಸಭೆ ಪೌರಾಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನಗರ ಸಭೆ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಅವರ ಪತಿ ಭೀಮಶಾ ಫುಲೆ ಸೇರಿದಂತೆ ಇತರರು ಸೇರಿ ರಸ್ತೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಮಾ.5 ರಂದು ಕಾಲೋನಿಯಲ್ಲಿ ಎಲ್ಲಾ ನಾಗರಿಕರು ಕೆಲಸಕ್ಕೆ ಹೋದ ಸಮಯದಲ್ಲಿ ಜೆಸಿಬಿ ತಂದು, ರಸ್ತೆಯ ಮೇಲೆ ತೆಗ್ಗು ಹೋಡೆದು ರಸ್ತೆ ಹಾಳು ಮಾಡಿದ್ದಾರೆ. ಹಿಂದೆ ಮಣ್ಣು ಹಾಕಿರುವ ರಸ್ತೆಯ ಮೇಲೆ ಬೃಹತ್ತಾದ ಕಾಂಪ್ಲೆಕ್ಸ್‌ ಕಟ್ಟಲು ಈ ರಸ್ತೆ ಅನಧೀಕೃತವಾಗಿ ಕಬಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಫುಲೆ, ಮೊರಖಂಡಿ ಗ್ರಾಮ ಪಂಚಾಯತ್ ಸದಸ್ಯ ಸಂಜು ಗಾಯಕವಾಡ್ ಅವರನ್ನು ಕೂಡಲೇ ಅವರ ಸ್ಥಾನಗಳಿಂದ ವಜಾಗೊಳಿಸಿ ಅವರ ಮೇಲೆ ಅಧಿಕಾರ ದುರೋಪಯೋಗದ ಅಡಿಯಲ್ಲಿ ಸೂಕ್ತ ತನಿಖೆ ನಡೆಸಿ, ಶಿಕ್ಷೆ ನೀಡುವ ಮೂಲಕ ದುರ್ಘಟನೆ ತೆಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಲೋನಿಯ ನಿವಾಸಿಗಳಾದ ನಿತ್ಯಾನಂದ ಮಂಠಾಳಕರ್, ಕವಿತಾ, ಮಂಗಲಾ, ಸುರುಬೈ, ರೇಣುಕಾ, ಸಿದ್ದರಾಮ್, ಪ್ರಶಾಂತ್, ಕಮಲಾಕರ್, ಮುರಲಿಧರ್, ಕಲ್ಲಪ್ಪ, ಪ್ರಕಾಶ್, ಅಸ್ಮಿತಾ, ಅರುಣ್, ನಾಗಮ್ಮ, ರೇಖಾ, ಆಶಾ ಹಾಗೂ ದಯಾನಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News