×
Ad

ಬೀದರ್ | ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರ್ ಗಳನ್ನು ರೋಡ್ ರೋಲರ್ ಮೂಲಕ ಧ್ವಂಸ

Update: 2025-03-07 17:11 IST

ಬೀದರ್ : ಕಳೆದ ಒಂದುವರೆ ತಿಂಗಳಿಂದ ನಗರದಲ್ಲಿ ಕೆಲವರು ಕರ್ಕಶ ಶಬ್ದ ಮಾಡುವ ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ರೋಡ್ ರೋಲರ್ ಮುಖಾಂತರ ಧ್ವಂಸ ಮಾಡಲಾಯಿತು.

ಸೈಲೆನ್ಸರ್ ಗಳು ಧ್ವಂಸ ಮಾಡಿದ ನಂತರ ಮಾತನಾಡಿದ ಎಸ್ಪಿ ಪ್ರದೀಪ್ ಗುಂಟಿ ಅವರು, ನಗರದಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿರುವಂತಹ ಬೈಕ್ ಗಳ ವಿರುದ್ಧ ಬೀದರ್ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆ ಬೈಕ್ ಗಳ ಸೈಲೆನ್ಸರ್ ವಶಕ್ಕೆ ಪಡೆದು, ಅವರ ಮೇಲೆ ದಂಡ ವಿಧಿಸಲಾಗಿದೆ. ವಶಕ್ಕೆ ಪಡೆದ ಎಲ್ಲ ಸೈಲೆನ್ಸರ್ ಗಳು ಸಾರ್ವಜನಿಕ ಸ್ಥಳದಲ್ಲಿ ಧ್ವಂಸಗೊಳಿಸಲಾಗಿದೆ ಎಂದು ಹೇಳಿದರು.

ಡಿಫೆಕ್ಟಿವ್ ಸೈಲೆನ್ಸರ್ ವಿಷಯದಲ್ಲಿಯೇ ಒಂದುವರೆ ತಿಂಗಳಲ್ಲಿ 1 ಲಕ್ಷ 30 ಸಾವಿರ ರೂ. ದಂಡ ವಿಧಿಸಿದ್ದೇವೆ. ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳು ಸಾರ್ವಜನಿಕ ಸ್ಥಳದಲ್ಲಿ ಧ್ವಂಸ ಮಾಡುವುದಕ್ಕೂ ಕಾರಣವಿದೆ. ಅದೇನೆಂದರೆ, ಈ ರೀತಿಯ ಸೈಲೆನ್ಸರ್ ಗಳು ಬಳಸುವುದರ ಮೂಲಕ ಟ್ರಾಫಿಕ್ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ರೀತಿಯ ತೊಂದರೆ ನಾವು ಸಹಿಸುವುದಿಲ್ಲ ಎನ್ನುವ ಸಂದೇಶ ಸಾರ್ವಜನಿಕರಿಗೆ ನೀಡಬೇಕಿತ್ತು ಎಂದಿದ್ದಾರೆ.

ಸತತವಾಗಿ ಎರಡು ಸಲ ಟ್ರಾಫಿಕ್ ಹಿಂಸೆ, ಹೆಲ್ಮೆಟ್ ಬಳಸದಿರುವುದು ಹಾಗೂ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಬಳಸಿದರೆ ಖಂಡಿತವಾಗಿಯೂ ಅವರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News