×
Ad

ಬೀದರ್ | ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿದ ತಮ್ಮ

Update: 2025-03-22 15:21 IST

ಬೀದರ್ : ಆಸ್ತಿಗೆಗಾಗಿ ಎರಡು ಕುಟುಂಬಗಳಲ್ಲಿ ಗಲಾಟೆ ನಡೆದು, ರಮೇಶ್ ಜಾಧವ್ ಎಂಬಾತ ತನ್ನ ಮಕ್ಕಳು ಮತ್ತು ಹೆಂಡತಿ ಜತೆಗೂಡಿ ತನ್ನ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಕಮಲನಗರ್ ತಾಲ್ಲೂಕಿನ ಡೋಣಗಾಂವ್ (ಎಮ್) ಗ್ರಾಮದಲ್ಲಿ ನಡೆದಿದೆ.

ಅಶೋಕ್ ಜಾಧವ್ (70) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ಸುಮಾರು 7:30 ಗಂಟೆಗೆ ಅಶೋಕ್ ಜಾಧವ್ ಅವರು ಮನೆಯಲ್ಲಿದ್ದರು. ಆ ಸಮಯದಲ್ಲಿ ಮನೆಗೆ ಬಂದ ಅವರ ತಮ್ಮ ರಮೇಶ್ ಜಾಧವ್, ಈತನ ಮಕ್ಕಳಾದ ಭರತ್ ಜಾಧವ್, ಹರಿ ಜಾಧವ್, ಅಶ್ವಿನಿ ಹಾಗೂ ಹೆಂಡತಿಯಾದ ರೇಖಾ ಜಮೀನಿನ ವಿಷಯದಲ್ಲಿ ಜಗಳ ಮಾಡಿದ್ದಾರೆ. ಈ ಹೊತ್ತಿಗೆ ಅಶೋಕ್ ಜಾಧವ್ ಅವರನ್ನು ಕೊಡಲಿಯಿಂದ ಹೊಡೆಯಲಾಗಿದ್ದು, ಅವರು ಮೃತಪಟ್ಟಿದ್ದಾರೆ. ಹಾಗೆಯೇ ಅಶೋಕ್ ಜಾಧವ್ ಅವರ ಮಗ ಗೋಪಾಲ್ ಜಾಧವ್ ಅವರಿಗೆ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News