×
Ad

ಬೀದರ್ | ಕಾರ್ಮೆಲ್ ಸೇವಾ ಟ್ರಸ್ಟ್ ವತಿಯಿಂದ ಮಕ್ಕಳ ಮೇಳ

Update: 2025-10-11 22:55 IST

ಬೀದರ್ : ಕಾರ್ಮೆಲ್ ಸೇವಾ ಟ್ರಸ್ಟ್ ವತಿಯಿಂದ ಕಾರ್ಮೆಲ್ ವೃತಿಪರ ತರಬೇತಿ ಸಂಸ್ಥೆಯಲ್ಲಿ ಮಕ್ಕಳ ಮೇಳ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಮರಿಯ ರೀತಾ, ಇಂದಿನ ಕಾರ್ಯಕ್ರಮ ಮಕ್ಕಳಲ್ಲಿ ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಅವರಲ್ಲಿದ್ದ ಪ್ರತಿಭೆಗಳನ್ನು ಹೊರತರುವ ಒಂದು ಸುಂದರ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಸಲುವಾಗಿ ಅವಾಗಾವಾಗ ನಡೆಯಬೇಕು ಎಂದು ಹೇಳಿದರು.

ಅವಿನಾಶ್ ಹಾಗೂ ಶರ್ಲಿನ್ ಅವರು ಮಕ್ಕಳಲ್ಲಿ ಸ್ವಯಂ ವಿಶ್ವಾಸದ ಶಕ್ತಿ ಮತ್ತು ಡಿಜಿಟಲ್ ಯುಗದಲ್ಲಿ ಸಮಯದ ಮೌಲ್ಯ ಈ ವಿಷಯಗಳ ಮೇಲೆ ಪಾಠ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಮೇಳದಲ್ಲಿ ಒಟ್ಟು 10 ಹಳ್ಳಿಗಳಿಂದ 310 ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಕ್ರಿಸ್ಟಿನ್ ಮಿಸ್ಕಿತ್, ಶ್ವೇತಾ ಹಾಗೂ ಕಾರ್ಮೆಲ್ ಸೇವಾ ಟ್ರಸ್ಟ್‌ನ ಸಿಬ್ಬಂದಿ ವರ್ಗ ಮತ್ತು ಬೋಧನಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News