ಬೀದರ್ | ಬೈಕ್‌ಗಳ ನಡುವೆ ಢಿಕ್ಕಿ : ವ್ಯಕ್ತಿ ಮೃತ್ಯು
Update: 2025-05-25 18:05 IST
ನಾಗುರಾಮ್ ಖೇತ್ರೆ
ಬೀದರ್ : ಎರಡು ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ವ್ಯಕ್ತಿಯೊರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿದ್ದಾಪುರ ಕ್ರಾಸ್ ಹತ್ತಿರ ನಡೆದಿದೆ.
ಮೃತರನ್ನು ಅಲಿಯಾಬಾದ್ (ಕೆ) ಗ್ರಾಮದ ನಿವಾಸಿ ನಾಗುರಾಮ್ ಖೇತ್ರೆ (47) ಎಂದು ಗುರುತಿಸಲಾಗಿದೆ.
ನಾಗುರಾಮ್ ಅವರು ಗುರುವಾರ ಸಾಯಂಕಾಲ ಅಲಿಯಾಬಾದ್ (ಕೆ) ಗ್ರಾಮದಿಂದ ಅಲಿಯಂಬರ್ ಗ್ರಾಮದ ಕಡೆಗೆ ಸಾಗುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ಢಿಕ್ಕಿ ಹೊಡೆದಿದ್ದು, ನಾಗುರಾಮ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.