×
Ad

ಬೀದರ್ : ಈದ್ಗಾ (ಸುನ್ನಿ) ವ್ಯವಸ್ಥಾಪನಾ ನಿರ್ವಹಣೆ ಸಮಿತಿ ರಚನೆಗೆ ಚುನಾವಣೆ; 16 ಮಂದಿ ಆಯ್ಕೆ

Update: 2025-10-28 11:05 IST

ಬೀದರ್ : ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿರುವ ಈದ್ಗಾ (ಸುನ್ನಿ) ವ್ಯವಸ್ಥಾಪನಾ ನಿರ್ವಹಣೆಗೆ ಸಮಿತಿ ರಚನೆಗೆ ಅ. 26 ರಂದು ಚುನಾವಣೆ ನಡೆದಿದ್ದು, 16 ಜನ ಆಯ್ಕೆಯಾಗಿದ್ದಾರೆ.

ಈದ್ಗಾ (ಸುನ್ನಿ) ವ್ಯವಸ್ಥಾಪನಾ ನಿರ್ವಹಣೆಗೆ ಸಮಿತಿ ರಚನೆಯ 16 ಸ್ಥಾನಗಳ ಚುನಾವಣೆಗೆ ಒಟ್ಟು 32 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 16 ಜನ ಆಯ್ಕೆಯಾಗಿದ್ದಾರೆ. ಒಟ್ಟು 743 ಮತದಾರರಿದ್ದು, ಅದರಲ್ಲಿ 697 ಜನ ಮತ ಚಲಾಯಿಸಿದ್ದಾರೆ. ಒಟ್ಟು ಶೇ. 93.93 ಮತದಾನವಾಗಿದೆ. ಇನ್ನು 5 ಜನರನ್ನು ಸರ್ಕಾರ ನಾಮನಿರ್ದೇಶನ ಮಾಡಲಿದೆ ಎಂದು ಚುನಾವಣಾ ಅಧಿಕಾರಿ ಸಲೀಂ ಪಾಷಾ ಅವರು ತಿಳಿಸಿದ್ದಾರೆ.

ಅಬ್ದುಲ್ ಅಝೀಝ್ ಮುನ್ನಾ, ಸಯ್ಯದ್ ತಲ್ಹಾ ಹಶ್ಮಿ, ಸಯ್ಯದ್ ಸರ್ಫರಾಜ್ ಹಶ್ಮಿ, ಜವ್ವಾದ್ ಅಹಮ್ಮದ್, ಅಕ್ರಮ್ ಖುರೇಷಿ, ಮುಬಶೀರ್ ಅಲಿ, ನಿಯಾಝ್ ಅಹಮ್ಮದ್, ಯೂಸುಫ್, ಅಬ್ದುಲ್ ಹಕೀಮ್, ಮಿರ್ಝಾ ಶಫೀಉಲ್ಲಾ ಬೇಗ್, ಅಬ್ದುಲ್, ಫಯಾಝ್ ಅಹಮ್ಮದ್, ವಾಹಿದ್ ಸಿದ್ದಿಕಿ, ಜಿಷಾನ್ ಹುಸೈನ್, ಮುನೀರ್ ಅಹಮ್ಮದ್ ಹಾಗೂ ಮುಜ್ತಬಾ ಖಾನ್ ಅವರು ವಿಜೇತ ಅಭ್ಯರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News