×
Ad

ಬೀದರ್ | ಹುಟ್ಟುಹಬ್ಬ ದಿನದಂದು ದುಬಾರಿ ಉಡುಗೊರೆ ಬದಲು ಹೆಲ್ಮೆಟ್, ಸೆಫ್ಟಿ ಹಾರ್ನೆಸ್ ಬೆಲ್ಟ್ ಉಡುಗೊರೆ ನೀಡಿ : ಮಹಮ್ಮದ್ ಜಾಫರ್ ಸಾದಿಕ್

Update: 2025-02-13 17:21 IST

ಬೀದರ್ : ಸಹೋದರಿಯರು ತನ್ನ ಅಣ್ಣ ತಮ್ಮಂದಿರಿಗೆ ರಕ್ಷಾ ಬಂಧನ, ಹುಟ್ಟುಹಬ್ಬದ ದಿನದಂದು ದುಬಾರಿ ಬೆಲೆಯ ಉಡುಗೊರೆ ನೀಡುವ ಬದಲು ಹೆಲ್ಮೆಟ್ ಹಾಗೂ ಸೆಫ್ಟಿ ಹಾರ್ನೆಸ್ ಬೆಲ್ಟ್ ಉಡುಗೊರೆಯಾಗಿ ನೀಡಿ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಮಹಮ್ಮದ್ ಜಾಫರ್ ಸಾದಿಕ್ ಮನವಿ ಮಾಡಿದರು.

ಇಂದು ಕರಡ್ಯಾಳ ಗ್ರಾಮದ ಗುರುಕುಲದಲ್ಲಿನ ಅನುಭವ ಮಂಟಪದಲ್ಲಿ ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಲೈಟ್ ಹಾಗೂ ದ್ವಿಚಕ್ರ ವಾಹನದ ಮೇಲೆ 4 ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಧರಿಸಬೇಕು. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ನಿಯಮಗಳ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ನಿಯಮಗಳ ಬಗ್ಗೆ ವಿವರಿಸಿದರು.

4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವಿಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗುವಾಗ ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸಬೇಕು. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆದೊಯ್ಯುವಾಗ ಗಂಟೆಗೆ 40 ಕಿ.ಮೀ. ವೇಗ ಮೀರತಕ್ಕದಲ್ಲ. 5 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದರು.

ಪ್ರತಿವರ್ಷ ಹೆಚ್ಚಾಗುತ್ತಿರುವ ಅಪಘಾತಗಳು ಕಡಿಮೆಯಾಗಿಸಲು ತಾಂತ್ರಿಕವಾಗಿ ವಿವರಿಸಿದ ಅವರು, ಎಮ್-ಪರಿವಾಹನ ಮತ್ತು ಪರಿವಾಹನ ಸೇವೆ ತಂತ್ರಾಂಶದಲ್ಲಿನ ಆನ್ ಲೈನ್ ಸೇವೆಗಳ ಬಗ್ಗೆ ತಿಳಿಸಿ, ಎಲ್ಲರೂ ರಸ್ತೆ ನಿಯಮ ಹಾಗೂ ರಸ್ತೆ ಬದಿಯಿರುವ ಸಂಕೇತಗಳನ್ನು ನೋಡಿ ಸುರಕ್ಷತೆಯಿಂದ ವಾಹನ ಚಲಾಯಿಸಬೇಕು ಎಂದು ಎಚ್ಚರಿಕೆ ನೀಡಿದರು.

ಗುರುಕುಲದ ಪಿಯುಸಿಯ ಆಯ್ದ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆ ಬಗ್ಗೆ ಭಾಷಣ ಸ್ಪರ್ಧೆ ಹಮ್ಮಿಕೊಂಡಿದ್ದು, ಅತ್ಯುತ್ತಮ ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ, ರಸ್ತೆ ಸುರಕ್ಷತೆ ಟೀ ಶರ್ಟ್ ಹಾಗೂ ಕ್ಯಾಲೆಂಡರ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾಲ್ಕಿ ಗ್ರಾಮಿಣ ವೃತ್ತದ ಸಿಪಿಐ ಜಿ ಎಸ್ ಬಿರಾದಾರ್, ಮೋಟಾರ್ ವಾಹನ ನಿರೀಕ್ಷಕ ವಿಯಕುಮಾರ್ ಉಮರಗೆ, ಉಪ ಪ್ರಾಂಶುಪಾಲ ಸಿದ್ರಾಮ್ ಘೋಗ್ಯಾ ಹಾಗೂ ರಮೇಶ ಪಟ್ಟೆ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News