ಬೀದರ್ | ಮಾ.26 ರಂದು ಬೃಹತ್ ಬಹಿರಂಗ ಸಮಾವೇಶ
ಬೀದರ್ : ಮಾ.26 ರಂದು ಚವದಾರ್ ಕೆರೆ ಸತ್ಯಾಗ್ರಹ ದಿನದ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಲ್ ಇಂಡಿಯಾ ಪ್ಯಾಂಥರ್ ಸೇನಾದ ವತಿಯಿಂದ ಬೃಹತ್ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಗೌರವಾಧ್ಯಕ್ಷ ದೇವೆಂದ್ರ ಸೋನಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 1927ರಲ್ಲಿ ಅಂಬೇಡ್ಕರ್ ಅವರು ಚವದಾರ್ ಕೆರೆ ನೀರಿನ ಸತ್ಯಾಗ್ರಹ ಮಾಡಿದರು. ಅದರ ನೆನಪಿಗಾಗಿ ನಾವು ಈ ಬಹಿರಂಗ ಸಭೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದೆ ಎಲ್ಲರನ್ನೂ ಕರೆದಿದ್ದೇವೆ. ಈ ಸತ್ಯಾಗ್ರಹದ ಬಗ್ಗೆ ಹೆಚ್ಚು ಜನರಿಗೆ ತಿಳುವಳಿಕೆ ಇಲ್ಲ. ಅದರ ಬಗ್ಗೆ ಜನರಿಗೆ ತಿಳಿಸಬೇಕು ಎನ್ನುವ ಕಾರಣಕ್ಕೆ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ರಾಜರತನ್ ಅಂಬೇಡ್ಕರ್, ಯಮಕನಮರಡಿಯ ಹುಣಸಿಕೊಳ್ಳ ಮಠದ ಜಗದ್ಗುರು ಶ್ರೀ ಸಿದ್ದ ಬಸವ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹಾಗೆಯೇ ಎಲ್ಲ ಪಕ್ಷದ ನಾಯಕ, ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 5 ರಿಂದ 6 ಸಾವಿರ ಜನ ಸೇರಬಹುದು ಎನ್ನುವ ನಿರೀಕ್ಷೆ ಇದೆ ಎಂದು ಪ್ರದೀಪ್ ಜಂಜಿರೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಭರತ್ ಕಾಂಬಳೆ, ತುಕಾರಾಮ್ ಚಿಮಕೋಡ್, ದೇವರಾಜ್ ಆರ್ಯ ಹಾಗೂ ಸಂತೋಷ್ ಕಾಂಬ್ಳೆ ಸೇರಿದಂತೆ ಇತರರು ಭಾಗವಹಿಸಿದ್ದರು.