×
Ad

ಬೀದರ್: ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆ

Update: 2025-05-21 11:36 IST

ಬೀದರ್: ಪತ್ನಿ ಸೇರಿದಂತೆ ಮೂವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ವಿಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ಹುಲಸೂರ್ ಪಟ್ಟಣದಲ್ಲಿ ನಡೆದಿದೆ.

ಹುಲಸೂರ್ ನಿವಾಸಿ ಪಾಂಡುರಂಗ ಕುಶೋಬಾ (32) ಆತ್ಮಹತ್ಯೆ ಮಾಡಿಕೊಂಡವರು.

" ಯುನೂಸ್ ಹೇಡೆ ಎಂಬಾತ ನನ್ನ ತಂಗಿಯ ಫೋಟೋ ಇರುವುದಾಗಿ ಹೇಳಿ ಬೆದರಿಸುತ್ತಿದ್ದಾನೆ. ಆತನ ಜೊತೆ ಸೇರಿ ನನ್ನ ಪತ್ನಿ ಮತ್ತು ಆಕೆಯ ತಾಯಿ ಕೂಡಾ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ವೀಡಿಯೊ ರೆಕಾರ್ಡ್ ಮಾಡಿಟ್ಟು ಪಾಂಡುರಂಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹುಲಸೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News