ಬೀದರ್ | ವ್ಯಕ್ತಿ ನಾಪತ್ತೆ ; ಪತ್ತೆಗಾಗಿ ಮನವಿ
Update: 2025-03-07 18:27 IST
ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಗುಂಡೂರ ಗ್ರಾಮದ ನಿವಾಸಿಯಾದ ರವಿ ಮಹಾದೇವ್ ಹಡಪದ್ (35) ಇವರು ನಾಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಮಂಠಾಳ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.19 ರಂದು ರವಿ ಮಹಾದೇವ್ ಹಡಪದ್ ಅವರು, ಹೊರಗಡೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವರು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಣೆಯಾದ ಈ ವ್ಯಕ್ತಿಯು 5 ಅಡಿ 5 ಇಂಚ್ ಎತ್ತರ ಇದ್ದು, ಗುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ದಪ್ಪ ಮೂಗು ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಮೈ ಮೇಲೆ ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಲುಂಗಿ ಧರಿಸಿರುತ್ತಾರೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ದೂರವಾಣಿ ಸಂಖ್ಯೆ: 257433, 257433, ಡಿಪಿಓ ನಂ. 226700 ಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.