×
Ad

ಬೀದರ್: ಪೊಕ್ಸೋ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ, ಗರ್ಭಪಾತ ಮಾಡಿದ ವೈದ್ಯನಿಗೆ 5 ವರ್ಷ ಜೈಲು

Update: 2025-03-07 09:41 IST

ಬೀದರ್ : ಪೊಕ್ಸೋ ಪ್ರಕರಣವೊಂದರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಮತ್ತು ಗರ್ಭಪಾತ ಮಾಡಿದ ವೈದ್ಯನಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಂತೋಷ್ ಮೇತ್ರೆ ಎಂಬಾತ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದು, ಡಾ. ವೈಜಿನಾಥ್ ಬಿರಾದಾರ್ ಗರ್ಭಪಾತ ಮಾಡಿಸಿ ಶಿಕ್ಷೆಗೆ ಗುರಿಯಾದ ವೈದ್ಯ.

2021 ರಲ್ಲಿ ಸಂತಪುರ ಗ್ರಾಮದಲ್ಲಿ 14 ವರ್ಷದ ಬಾಲಕಿ ಮೇಲೆ ಸಂತೋಷ್ ನಿರಂತರವಾಗಿ ಅತ್ಯಾಚಾರ ಎಸಗಿದ್ದ. 2022 ರಲ್ಲಿ ಆ ಬಾಲಕಿ ಗರ್ಭವತಿಯಾಗಿರುವುದು ದೃಢಪಟ್ಟಿದೆ. ನಂತರ ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾ. ವೈಜಿನಾಥ್ ಬಿರಾದಾರ್ ಎಂಬ ವೈದ್ಯ ಆ ಬಾಲಕಿಯ ಗರ್ಭಪಾತ ಮಾಡಿಸಿರುತ್ತಾನೆ ಎಂದು ಸಂತಪುರ ಸಿಡಿಪಿಓ ಭೀಮಸೇನ್ ಚವ್ಹಾಣ ಅವರು 2023 ರಲ್ಲಿ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ.

ಅಂದಿನ ಪಿಎಸ್ಐ ಮೆಹೆಬೂಬ್ ಅಲಿ ಅವರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಔರಾದ್ ನ ಸಿಪಿಐ ರಘುವೀರ ಸಿಂಗ್ ಠಾಕೂರ್ ಅವರು ಈ ಪ್ರಕರಣ ಬಗ್ಗೆ ಕೂಲಂಕೂಶವಾಗಿ ತನಿಖೆ ಪೂರ್ಣಗೊಳಿಸಿ 2023 ರಲ್ಲಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿರುತ್ತಾರೆ.

ಇದೀಗ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News