×
Ad

ಬೀದರ್ | ಸಿಜೆಐ ಮೇಲೆ ಶೂ ಎಸೆದಿರುವ ವಕೀಲನನ್ನು ಗಡಿಪಾರು ಮಾಡಲು ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

Update: 2025-10-09 17:38 IST

ಬೀದರ್ : ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ವಕೀಲನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಯಿಂದ ಭಾಲ್ಕಿ ನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಗುರುವಾರ ಭಾಲ್ಕಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಶೂ ಎಸೆದ ವಕೀಲನ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ ಕಚೇರಿಗೆ ತಲುಪಿ ಮನವಿ ಪತ್ರ ಸಲ್ಲಿಸಲಾಯಿತು.

ಭಾಲ್ಕಿಯ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅ.6 ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕೃತ್ಯ ಎಸಿಗಿ ಅಪರಾಧಿ ವಿರುದ್ಧ ಉನ್ನತ ತನಿಖೆ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಘಟನೆಯ ಹಿಂದಿರುವ ಸಂವಿಧಾನ ದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟಿನ್ ಮುಖ್ಯ ನ್ಯಾಯಾಧೀಶರನ್ನು ಈ ರೀತಿ ಅವಮಾನಿಸಲಾಗಿದೆ. ಈ ಅವಮಾನ ಈ ದೇಶಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರವಾಗಿದೆ. ಇಂತಹ ಹೀನ ಕೃತ್ಯ ಎಸಗಿದ ಸನಾತನಿ ದೇಶದ್ರೋಹಿಗೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪ್ರಶಾಂತ್ ಕೋಟಗೇರಾ, ಗಗನ್ ಫುಲೆ, ಡಿಎಸ್ಎಸ್ ಸಂಚಾಲಕ ಶಿವಕುಮಾರ್ ಮೇತ್ರೆ, ಪ್ರದೀಪ್ ಮೊರೆ, ಭೀಮ್ ಆರ್ಮಿಯ ತಾಲೂಕು ಅಧ್ಯಕ್ಷ ಸಿದ್ದಾರ್ಥ್ ಪ್ಯಾಗೆ, ವಿಶ್ವನಾಥ್ ಮೊರೆ, ವಿಲಾಸ್ ಅರ್ಜುನ್, ಅಶೋಕ್ ಗಾಯಕವಾಡ್, ರಾಜಕುಮಾರ್ ಭಾಟಸಾಂಗವೆ, ಉತ್ತಮ ಕುಂದೆ, ರಾಜಕುಮಾರ್ ಭಟಾರೆ, ಮಲ್ಲಿಕಾರ್ಜುನ್ ನೇಳಗೆ ಹಾಗೂ ಘಾಳೆಪ್ಪಾ ಮೈಲೂರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News