×
Ad

ಬೀದರ್ | ನೇಕಾರ ಸಮುದಾಯದಿಂದ ಆ್ಯಪ್ ಮೂಲಕ ಪ್ರತ್ಯೇಕ ಜಾತಿ ಗಣತಿ ಸಮೀಕ್ಷೆ : ಬಿ.ಎಸ್ ಸೋಮಶೇಖರ್

Update: 2025-10-11 22:48 IST

ಬೀದರ್ : ರಾಜ್ಯದಾದ್ಯಂತ ನೇಕಾರ ಸಮುದಾಯದ ಪ್ರತ್ಯೇಕ ಜಾತಿ ಗಣತಿ ಸಮಿಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ನೇಕಾರ ಸಮುದಾಯದ ರಾಜ್ಯಾಧ್ಯಕ್ಷ ಬಿ.ಎಸ್ ಸೋಮಶೇಖರ್ ಅವರು ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್ ಸೋಮಶೇಖರ್, 2015ರಲ್ಲಿ ಆದ ಜಾತಿಗಣತಿ ವರದಿಯು 2025ರಲ್ಲಿ ಬಿಡುಗಡೆಯಾಗಿದೆ. ಅದರಲ್ಲಿ ಬರೀ 9 ಲಕ್ಷ 28 ಸಾವಿರ ಜನ ಮಾತ್ರ ನೇಕಾರ ಸಮುದಾಯದವರೆಂದು ಕಾಂತರಾಜ ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ ಇಡೀ ರಾಜ್ಯದಾದ್ಯಂತ 45 ರಿಂದ 50 ಸಾವಿರ ನೇಕಾರ ಸಮುದಾಯದ ಜನರಿದ್ದಾರೆ. ಈ ಸತ್ಯವನ್ನು ದಾಖಲೆ ಸಹಿತವಾಗಿ ಸರಕಾರ ಸಲ್ಲಿಸುವುದಕ್ಕಾಗಿ ನಾವು ಆ್ಯಪ್ ಮೂಲಕ ಪ್ರತ್ಯೇಕ ಸಮೀಕ್ಷೆ ನಡೆಸುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರ ಜಾತಿಗಣತಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಸಮುದಾಯದ ಹಿತದೃಷ್ಟಿ ಇರಿಸಿ ಪ್ರತ್ಯೇಕ ಸಮಿಕ್ಷೆ ಮಾಡುತ್ತಿದ್ದೇವೆ. ನಮ್ಮ ಪ್ರತ್ಯೇಕ ಸಮೀಕ್ಷೆಯಿಂದ ನಮ್ಮ ನಿಖರವಾದ ಜನಸಂಖ್ಯೆ ನಮಗೆ ತಿಳಿಯಲಿದೆ. ಇದರಿಂದ ನಮ್ಮ ಸಮುದಾಯಕ್ಕೆ ರಾಜಿಕೀಯ ಪ್ರಾತಿನಿಧ್ಯ ಜೊತೆಗೆ ಹಲವು ಸವಲತ್ತುಗಳು ಸಿಗಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನೇಕಾರ ಸಮುದಾಯದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ಭಂಡಾರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟಿ, ರಾಜ್ಯ ಖಜಾಂಚಿ ನವಿನ ಚಿಲ್ಲಾಳ್, ರಾಜ್ಯ ಕಾರ್ಯದರ್ಶಿ ವಿ.ಟಿ ಪಿಚಾಡಿ, ರಾಜ್ಯ ಮಹಿಳಾ ಅಧ್ಯಕ್ಷೆ ಉಮಾ, ರಾಜ್ಯ ಕಾರ್ಯಾಧ್ಯಕ್ಷೆ ಶೋಭಾ, ಪ್ರಧಾನ ಕಾರ್ಯದರ್ಶಿ ಹೇಮಲತಾ, ನಿರ್ದೇಶಕಿ ಉಮಾದೇವಿ, ಜ್ಯೋತಿ ಸರೋದೆ, ಶಿಲ್ಪಾ, ಉಪಾಧ್ಯಕ್ಷೆ ರುಕ್ಮಿಣಿ ಸಂಗಾ, ಆರ್.ಸಿ ಘಾಳೆ ಹಾಗೂ ಜಿಲ್ಲಾಧ್ಯಕ್ಷ ಸೋಮಶೇಖರ್ ಅಮಲಾಪುರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News