ಬೀದರ್ | ವ್ಯಕ್ತಿ ಕಾಣೆ; ಪತ್ತೆಗಾಗಿ ಮನವಿ
Update: 2025-03-07 18:25 IST
ಬೀದರ್ : ಕಮಲನಗರ್ ತಾಲ್ಲೂಕಿನ ಮಾಳೆಗಾಂವ್ ಮಹಾದೇವ ನಗರ ತಾಂಡಾದ ನಿವಾಸಿಯಾದ ರಾಮರಾವ್ ರಾಠೋಡ್ (43) ಇವರು ಕಾಣೆಯಾಗಿದ್ದು, ಈ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಹೊಕ್ರಾಣಾ ಪೊಲೀಸ್ ಠಾಣೆಯ ಪಿಎಸ್ಐ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮರಾವ್ ರಾಠೋಡ್ ಅವರು ಜ.10 ರಂದು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವರು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಕಾಣೆಯಾದ ವ್ಯಕ್ತಿಯು 5 ಅಡಿ 5 ಇಂಚ್ ಎತ್ತರ ಇದ್ದು, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಗೋಲು ಮುಖ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಇವರ ಮೈಮೇಲೆ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಹೊಕ್ರಣಾ ಪೊಲೀಸ್ ಠಾಣೆಯ ಪಿಎಸ್ಐ ಮೊಬೈಲ್ ಸಂಖ್ಯೆ: 82779 75080 ಅಥವಾ ಸಿಪಿಐ ಮೊಬೈಲ್ ಸಂಖ್ಯೆ: 94808 03430 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.