ಬೀದರ್ | ಶಾಲೆಯ ಬಿಸಿಯೂಟದ ಅಡುಗೆ ಸಾಮಗ್ರಿಗಳು ಕಳ್ಳತನ : ಪ್ರಕರಣ ದಾಖಲು
Update: 2025-08-26 18:41 IST
ಬೀದರ್ : ಭಾಲ್ಕಿ ತಾಲ್ಲೂಕಿನ ಡೋಣಗಾಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಸಾಮಗ್ರಿಗಳು ಕಳ್ಳತನವಾದ ಘಟನೆ ನಡೆದಿದ್ದು, ಸೋಮವಾರ ಪ್ರಕರಣ ದಾಖಲಾಗಿದೆ.
ಶನಿವಾರ ಮತ್ತು ರವಿವಾರ ಶಾಲೆಗೆ ರಜೆ ಇದ್ದ ಕಾರಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಇದೇ ಸಮಯ ನೋಡಿಕೊಂಡ ಕಳ್ಳರು ಶಾಲೆಯಲ್ಲಿನ ಎರಡು ಅಡುಗೆ ಗ್ಯಾಸ್, 6 ಭಗೋಣಿ ಪಾತ್ರೆ, ಒಂದು ಕುಕ್ಕರ್ ಹಾಗೂ 20 ನೀರು ಕುಡಿಯುವ ಗ್ಲಾಸ್ ಗಳು ಹೀಗೆ ಒಟ್ಟು 25 ಸಾವಿರ ರೂ. ಮೌಲ್ಯದ ವಸ್ತುಗಳು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.