ಹುಮನಾಬಾದ್ | ಸಣ್ಣ ಮಕ್ಕಳು ವಾಹನ ಚಲಾಯಿಸುವುದು ಕಾನೂನಾತ್ಮಕ ಅಪರಾಧ : ನ್ಯಾ.ಸಣ್ಣ ಹನುಮೇಗೌಡ
ಹುಮನಾಬಾದ್ : ಸಣ್ಣ ಮಕ್ಕಳು ವಾಹನ ಚಲಾಯಿಸುವುದು ಕಾನೂನಾತ್ಮಕ ಅಪರಾಧವಾಗಿದ್ದು, ಪೋಷಕರು ಮಕ್ಕಳ ಕೈಯಲ್ಲಿ ವಾಹನ ನೀಡಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಧೀಶ ಸಣ್ಣ ಹನುಮೇಗೌಡರು ಹೇಳಿದರು.
ತಾಲೂಕಿನ ದುಬಲಗುಂಡಿ ಗ್ರಾಮದ ಬಸವತೀರ್ಥ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ಹುನುನಾಬಾದ್ ನ ವಕೀಲರ ಸಂಘ, ತಾಲೂಕು ಶಿಕ್ಷಣ ಇಲಾಖೆ, ತಾಲೂಕು ಅರಣ್ಯ ಇಲಾಖೆ ಮತ್ತು ದುಬಲಗುಂಡಿಯ ಬಸವತೀರ್ಥ ವಿದ್ಯಾ ಪೀಠ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ 'ರಸ್ತೆ ಸುರಕ್ಷತಾ ಮುಂಜಾಗ್ರತೆ ಅಭಿಯಾನ ಮತ್ತು ಇಂದು ರಕ್ಷಿಸಿ ನಾಳೆ ಉಳಿಸಿ ಪರಿಸರ ಸಂರಕ್ಷತಾ ಅಭಿಯಾನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಮಕ್ಕಳು ವಾಹನ ಚಲಾಯಿಸುವುದು ಕಾನೂನಾತ್ಮಕ ಅಪರಾಧವಾಗಿದೆ. ಮಕ್ಕಳು ವಯಸ್ಸಿಗೆ ಬರುವವರೆಗೂ ವಾಹನ ಚಲಾಯಿಸಬಾರದು. ಮಕ್ಕಳು ಹಾಗೂ ಪೋಷಕರಿಗೆ ಹೆಲ್ಮೆಟ್ ಬಗ್ಗೆ, ಪರವಾನಗಿ ಬಗ್ಗೆ ಇತರರಿಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಸವ ತೀರ್ಥ ವಿದ್ಯಾಪೀಠ ಸ್ಥಳೀಯ ಸಮಿತಿಯ ಅಧ್ಯಕ್ಷ ರಾಜಶೇಖರ್ ಶಿರಶೆಟ್ಟಿ, ವಲಯ ಅರಣ್ಯಧಿಕಾರಿ ಪ್ರಕಾಶ್, ಸಹಾಯಕ ಸರಕಾರಿ ಅಭಿಯೋಜಕ ಶ್ರೀನಿವಾಸ್ ಪಾಟೀಲ್, ತಾಲೂಕಾ ವಕೀಲರ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಜೋತಗೊಂಡ, ತಾಲೂಕಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ನಾತೆ, ಗ್ರಾಮದ ಹಿರಿಯ ವಕೀಲ ಡಿ. ಮಹಾದೇವಪ್ಪಾ ಡೋಂಗರಗಿ, ಪ್ರಮುಖರಾದ ಶಂಕರ್ ಗಂಗಾ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಕಾಶಪ್ಪನವರ್ ಉಪಸ್ಥಿತರಿದ್ದರು.