ಹುಮನಾಬಾದ್ | ಸಿಂಧನಕೇರಾ ಗ್ರಾಮದಲ್ಲಿ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ
ಹುಮನಾಬಾದ್ : ಸಿಂಧನಕೇರಾ ಗ್ರಾಮದಲ್ಲಿ ಚಿಟಗುಪ್ಪಾ ಪೊಲೀಸ್ ಠಾಣೆಯ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಸಲಾಯಿತು.
ಚಿಟಗುಪ್ಪಾ ಪೊಲೀಸ್ ಠಾಣೆಯ ಎಎಸ್ಐ ಭೀಮರಾವ್ ಅವರು ಮಾತನಾಡಿ, ಸಾರ್ವಜನಿಕರು ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ತೊಂದರೆಗಳಿಗೆ 112 ಗೆ ಕರೆ ಮಾಡಬೇಕು. 112 ಗೆ ಕರೆ ಮಾಡಿದರೆ ಯಾವುದೇ ತುರ್ತು ಸೇವೆಗಳಾದ ಆಂಬುಲೆನ್ಸ್, ಅಗ್ನಿ ಶಾಮಕ ದಳಕ್ಕೆ ಸಂಪರ್ಕಿಸಲಾಗುವುದು. ಸೈಬರ್ ಅಪರಾಧಗಳು, ಫೇಕ್ ಐಡಿ ಮಾಡಿ ವಂಚನೆಗೆ ಸಂಬಂಧಿಸಿದ ಸಮಸ್ಯೆಗಳಿಗೆ 1930 ಸಂಖ್ಯೆಗೆ ಕರೆ ಮಾಡಬೇಕು. ಆವಾಗ ಫೇಕ್ ಐಡಿ ಮಾಡಿರುವು ಅಕೌಂಟ್ ಅವರು ತಡೆ ಹಿಡಿಯಲಾಗುವುದು ಎಂದರು.
ಅಕ್ರಮ ಚಟುವಟಿಕೆ, ಮಕ್ಕಳ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಶಾಲಾ ಮಕ್ಕಳಿಗೆ ಯಾರಾದರೂ ತೊಂದರೆ ನೀಡುತ್ತಿದ್ದರೆ ಪೊಲೀಸರಿಗೆ ಸಂಪರ್ಕ ಮಾಡಬೇಕು. ಸಾರ್ವಜನಿಕರ ಹಿತಕ್ಕಾಗಿಯೇ ಪೊಲೀಸರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಯಾವುದೇ ರೀತಿಯ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಟಕಾ, ಜೂಜಾಟ, ಇಸ್ಪೀಟ್, ಆಡುವುದನ್ನು ಕಂಡು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಡ್ ಕಾನ್ಸ್‌ಟೇಬಲ್ ರಾಜಶೇಖರ್, ಗ್ರಾಮಸ್ಥರಾದ ಸುನಿಲ್ ಹವನಾಯಕ್, ಫತ್ರುಸಾಬ್, ಬಸವರಾಜ್, ಆಹಾದ್, ದಸ್ತಗೀರ್, ನಿಜಾಮುದ್ದೀನ್, ಗೋರಕ್, ಆಸಿಫ್, ಮಲ್ಲೇಶ್, ಲಕ್ಷ್ಮಣ್ ಹಾಗೂ ಸಂಜುಕುಮಾರ್ ಸೇರಿದಂತೆ ಇತರರು ಇದ್ದರು.