×
Ad

ಬೀದರ್‌ | ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಕಲಿಯುವುದು ಅನಿವಾರ್ಯ : ಪ್ರಕಾಶ್ ರಾಠೋಡ್

Update: 2025-11-09 18:39 IST

ಬೀದರ್‌ : ಕಂಪ್ಯೂಟರ್‌ ಕಲಿಕೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರಭಾರಿ ಬಿಇಒ ಪ್ರಕಾಶ್ ರಾಠೋಡ್ ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಪಟ್ಟಣ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎರಡನೇ ಹಂತದಲ್ಲಿ ಏರ್ಪಡಿಸಿದ್ದ 5 ದಿನಗಳ ಇಂಡಕ್ಷನ್ ಮತ್ತು ರಿಫ್ರೆಶರ್ ಕಂಪ್ಯೂಟರ್ ಬುನಾದಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶೈಕ್ಷಣಿಕವಾಗಿ ಎಷ್ಟೇ ಪದವಿಗಳನ್ನು ಪಡೆದರೂ, ಕಂಪ್ಯೂಟರ್‌ ಜ್ಞಾನ ಇಲ್ಲದೇ ಹೋದರೆ ಜೀವನ ಸಾಗಿಸುವುದು ಕಷ್ಟ. ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಕಲಿಯುವುದು ತೀರ ಅನಿವಾರ್ಯ ಎಂದು ಹೇಳಿದರು.

ಡಯಟ್ ಉಪನ್ಯಾಸ ಲಕ್ಷ್ಮಣ ತುರೆ ಅವರು ಮಾತನಾಡಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸ್ ಆಗುವುದನ್ನು ರಾಜ್ಯ ಸರಕಾರ ಈಗ ಕಡ್ಡಾಯಗೊಳಿಸಿದೆ. ಆದ್ದರಿಂದ ಎಲ್ಲ ಶಿಕ್ಷಕರು ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಸಿಯೂಟ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ್ ಮಾತನಾಡಿ, ಇಂದು ಪ್ರಪಂಚ ಕಂಪ್ಯೂಟರ್ ಮತ್ತು ಡಿಜಿಟಲ್ ಗ್ಯಾಜಟ್‌ಗಳಿಂದಲೇ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಕಂಪ್ಯೂಟರ್ ಬಳಕೆ ಪ್ರತಿಯೊಂದು ದೇಶದ ಅವಿಭಾಜ್ಯ ಅಂಗವೇ ಆಗಿದೆ. ಒಂದು ದೇಶ ವೇಗವಾಗಿ ಬೆಳೆಯುತ್ತಿದೆ ಎಂದರೆ ಅಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದಾಗಿದೆ ಎಂದರು.

ಪ್ರತಿಯೊಬ್ಬರು ಕಂಪ್ಯೂಟರ್ ಶಿಕ್ಷಣ ಪಡೆಯಬೇಕು. ಕಂಪ್ಯೂಟರ್ ಪ್ರೋಗ್ರಾಮ್ ಮತ್ತು ಅದಕ್ಕೆ ಸಂಬಂಧಿಸಿದ ಸಾಧನಗಳ ಬಗ್ಗೆ ಅರಿತುಕೊಳ್ಳಬೇಕು ಎಂಬ ದೃಷ್ಟಿಯಿಂದ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ತರಬೇತಿ ನೋಡಲ್ ಅಧಿಕಾರಿ ಸಂತೋಷ್ ರೆಡ್ಡಿ, ಶಶಿಕಾಂತ್ ಬಿಡವೆ, ನಯುಮೋದ್ಧಿನ್, ಜ್ಯೋತಿ ಜಿರ್ಗೆ, ರಮೇಶ್ ಧೋಣೆ, ಶಿವಕುಮಾರ್ ಬಂಬುಳಗೆ ಹಾಗೂ ಆಶಾಬಿ ಸೇರಿದಂತೆ 50 ಜನ ಶಿಕ್ಷಕರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News