ಬೀದರ್: ಎ ಎಸ್ ಐ, ಎ ಆರ್ ಎಸ್ ಬಿ ಪೊಲೀಸ್ ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ತರಬೇತಿ
ಬೀದರ್ : ಜಿಲ್ಲೆಯ ಎ ಎಸ್ ಐ ಮತ್ತು ಎ ಆರ್ ಎಸ್ ಬಿ ಪೊಲೀಸ್ ಅಧಿಕಾರಿಗಳಿಗೆ 5 ದಿವಸಗಳ ಕಾಲ ಜಿಲ್ಲಾ ಪೊಲೀಸ್ ಕವಾಯಿತ್ ಮೈದಾನದಲ್ಲಿ ಪಿಸ್ತೂಲ್ ಹಾಗೂ ಇತರ ಮಾದರಿಯ ಆಯುಧಗಳ ವಿಶೇಷ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಎಆರ್ ಘಟಕದ ಉಪಾಧೀಕ್ಷಕ ಸುನಿಲ್ ಕೊಡ್ಲಿ ಅವರ ನೇತೃತ್ವದಲ್ಲಿ ಆಯುಧಗಾರರ ಸಹಕಾರದೊಂದಿಗೆ ಜಿಲ್ಲೆಯ 139 ಜನ ಎ ಎಸ್ ಐ ಹಾಗೂ ಎ ಆರ್ ಎಸ್ ಬಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ ಎಸ್ ಐ ಹಾಗೂ ಎ ಆರ್ ಎಸ್ ಐ ಪೊಲೀಸ್ ಅಧಿಕಾರಿಗಳಿಗೆ ಸಹಾಯವಾಣಿ ಇ ಆರ್ ಎಸ್ ಎಸ್-112 ಮತ್ತು ಹೈವೇ ಪಟ್ರೋಲಿಂಗ್ ಕರ್ತವ್ಯಕ್ಕೆ ನೇಮಿಸುವಾಗ ಇನ್ನು ಮುಂದೆ ಶಸ್ತ್ರಾಸ್ತ್ರ (ಪಿಸ್ತೂಲ್) ದೊಂದಿಗೆ ನೇಮಿಸಲಾಗುತ್ತಿದೆ. ಹಾಗಾಗಿ ಅವರಿಗೆ ಪಿಸ್ತೂಲ್ ಹಾಗೂ ಇನ್ನೂಳಿದ ಮಾದರಿಯ ಆಯುಧಗಳ ವಿಶೇಷ ತರಬೇತಿ ಅವಶ್ಯಕವಾಗಿತ್ತು. ಇದರಿಂದಾಗಿ ಅವರಿಗೆ ಪಿಸ್ತೂಲ್ ಹಾಗೂ ಇತರ ಮಾದರಿಯ ಆಯುಧಗಳ ತರಬೇತಿ ನೀಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.