ಪಾಕಿಸ್ತಾನ ವಿರುದ್ಧ ಭರ್ಜರಿ ಜಯಗಳಿಸಿದ ಅಫ್ಘಾನಿಸ್ತಾನ
ವಿಶ್ವಕಪ್ ಆರಂಭದಲ್ಲಿ ಹೈದರಾಬಾದ್ ನಲ್ಲಿ ಎರಡು ಪಂದ್ಯಗಳನ್ನಾಡಿದ ಪಾಕಿಸ್ತಾನ ಮೊದಲು ನೆದರ್ ಲ್ಯಾಂಡ್ ಸೋಲಿಸಿತ್ತು. ಬಳಿಕ ಶ್ರೀಲಂಕಾಗೂ ಅದೇ ಹಾದಿ ತೋರಿಸಿತ್ತು. ಆ ಬಳಿಕ ಪಾಕಿಸ್ತಾನ ತಂಡ ವಿಶ್ವಕಪ್ ನಲ್ಲಿ ತನ್ನ ಖಾತೆ ತೆರೆದಿಲ್ಲ.
Photo : cricketworldcup.com
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿದೆ. ಒಂದು ಓವರ್ ಬಾಕಿಯಿರುವಂತೆ ಇನ್ನಿಂಗ್ಸ್ ಮುಗಿಸಿದ ಅಫ್ಘಾನಿಸ್ತಾನ 8 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತು. ಆ ಮೂಲಕ ಪಾಕಿಸ್ತಾನ ತಂಡಕ್ಕೆ ಸರಣಿ ಸೋಲುಣಿಸಿತು.
ವಿಶ್ವಕಪ್ ಆರಂಭದಲ್ಲಿ ಹೈದರಾಬಾದ್ ನಲ್ಲಿ ಎರಡು ಪಂದ್ಯಗಳನ್ನಾಡಿದ ಪಾಕಿಸ್ತಾನ ಮೊದಲು ನೆದರ್ ಲ್ಯಾಂಡ್ ಸೋಲಿಸಿತ್ತು. ಬಳಿಕ ಶ್ರೀಲಂಕಾಗೂ ಅದೇ ಹಾದಿ ತೋರಿಸಿತ್ತು. ಆ ಬಳಿಕ ಪಾಕಿಸ್ತಾನ ತಂಡ ವಿಶ್ವಕಪ್ ನಲ್ಲಿ ತನ್ನ ಖಾತೆ ತೆರೆದಿಲ್ಲ. ಈಗ ಅಂಕ ಪಟ್ಟಿಯಲ್ಲಿ 4 ಅಂಕ ಗಳೊಂದಿಗೆ 5 ನೇ ಸ್ಥಾನದಲ್ಲಿದ್ದು, ರನ್ ರೇಟ್ ಆಧಾರದಲ್ಲಿ 5 ನೇ ಸ್ಥಾನದಲ್ಲಿ ಉಳಿದಿದೆ. ಅಫ್ಘಾನಿಸ್ತಾನ ಪಾಕಿಸ್ತಾನ ತಂಡದ ಜೊತೆಗೆ 4 ಅಂಗಳೊಂದಿಗೆ ರನ್ ರೇಟ್ ಆಧಾರದಲ್ಲಿ 6 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಪಾಕಿಸ್ತಾನ ನೀಡಿದ 283 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ರಹ್ಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಪಾಕಿಸ್ತಾನದ ಬೌಲರ್ ಗಳನ್ನು ದಂಡಿಸಿದರು .ಮೊದಲ ವಿಕೆಟ್ ಗೆ 130 ರನ್ ಜೊತೆಯಾಟದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸುವ ಮುನ್ಸೂಚನೆ ನೀಡಿದರು.
53 ಎಸೆತಗಳಲ್ಲಿ 9 ಆಕರ್ಷಕ ಬೌಂಡರಿ ಮತ್ತು 1 ಸಿಕ್ಸರ್ ಹೊಡೆದ ಗುರ್ಬಾಝ್ 65 ರನ್ ಗಳಿಸಿ ಔಟ್ ಆದರು. ಇಬ್ರಾಹಿಂ ಝದ್ರಾನ್ ತಾಳ್ಮೆಯ ಆಟವಾಡಿದರು. 113 ಎಸೆತಗಳನ್ನು ಎದುರಿಸಿದ್ದ ಅವರು 10 ಬೌಂಡರಿಗಳೊಂದಿಗೆ 87 ರನ್ ಗಳಿಸಿ ಔಟಾದರು.
ಬ್ಯಾಟಿಂಗ್ ಬಲ ತೋರಿದ ರಹ್ಮತ್ ಶಾ 77 ರನ್, ನಾಯಕ ಹಸ್ಮತುಲ್ಲಾ ಶಾಹಿದಿ 48 ರನ್ ಗಳಿಸಿ ಪಂದ್ಯವನ್ನು ರೋಚಕ ತಿರುವಿನತ್ತ ಕೊಂಡೊಯ್ದರು. 49 ಓವರ್ ಗಳಲ್ಲಿ ಕೇವಲ 2 ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡ ಅಫ್ಘಾನಿಸ್ತಾನ 286 ರನ್ ಗಳಿಸಿ 8 ವಿಕೆಟ್ ಗಳ ಅಂತರದ ಭಾರೀ ಜಯಭೇರಿ ಬಾರಿಸಿತು.
ಅಫ್ಘಾನಿಸ್ತಾದ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಮುಂದೆ ಪಾಕಿಸ್ತಾನದ ಬೌಲರ್ ಗಳು ಮಂಕಾದರು. ಶಾಹಿನ್ ಆಫ್ರಿದಿ, ಹಸನ್ ಅಲಿ ತಲಾ ಒಂದು ವಿಕೆಟ್ ಪಡೆದರು.
Photo : cricketworldcup.com
ಮೊದಲು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಬರ್ ಅಝಮ್ ಬಳಗ ಚೆಪಾಕ್ ನ ಬೌಲಿಂಗ್ ಪಿಚ್ ನಲ್ಲಿ ಉತ್ತಮ ಆರಂಭ ಪಡೆಯಿತು. 10. 1 ಓವರ್ ನಲ್ಲಿ ಇಮಾಮುಲ್ ಹಕ್ 22 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 17 ರನ್ ಗಳಿಸಿ ಅಝ್ಮತುಲ್ಲಾ ಓಮರ್ಝಾಯಿ ಅವರ ಬೌಲಿಂಗ್‌ನಲ್ಲಿ ನವೀನ್ ಉಲ್ ಹಕ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ನಾಯಕ ಬಾಬರ್ ಅಝಮ್ ನಾಯಕನ ಜವಾಬ್ದಾರಿಯುತ ಆಟವಾಡಿದರು. ಅಬ್ದುಲ್ಲಾ ಶಫೀಕ್ ಜೊತೆಗೂಡಿ ಇನ್ನಿಂಗ್ ಕಟ್ಟುವ ಪ್ರಯತ್ನ ಮಾಡಿದರು. 54 ರನ್ ಗಳ ಜೊತೆಯಾಟ ಆಡುವಾಗ 22.3 ಓವರ್‌ಗಳಲ್ಲಿ ಅಬ್ದುಲ್ಲಾ ಶಫೀಕ್ 75 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿಗಳೊಂದಿಗೆ 58 ರನ್ ಗಳಿಸಿದ್ದಾಗ ನೂರ್ ಅಹ್ಮದ್ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
ವಿಕೆಟ್ ಕೀಪರ್ ಮುಹಮ್ಮದ್ ರಿಝ್ವಾನ್ ಉತ್ತಮ ಆಟ ಪ್ರದರ್ಶನದ ನಿರೀಕ್ಷೆ ಹುಸಿಯಾಯಿತು. ಅವರು ಒಂದು ಸಿಕ್ಸರ್ ಬಾರಿಸಿ 10 ಎಸೆತಗಳಲ್ಲಿ 8 ರನ್ ಗಳಿಸಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಮುಜೀಬುರ್ರಹ್ಮಾನ್ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು.ಸೌದ್ ಶಕೀಲ್ 25, ಇಫ್ತಿಕಾರ್ 40, ಶಾದಾಬ್ ಖಾನ್ 40, ಶಾಹಿನ್ ಅಫ್ರಿದಿ 3 ರನ್ ಗಳಿಸಿದರು. 92 ಎಸೆತ ಎದುರಿಸಿದ ಬಾಬರ್ 4 ಬೌಂಡರಿಗಳೊಂದಿಗೆ 1 ಸಿಕ್ಸರ್ ಸಹಿತ 74 ರನ್ ಗಳಿಸಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಮುಹಮ್ಮದ್ ನಬಿಗೆ ಕ್ಯಾಚಿತ್ತು ನಿರ್ಗಮಿಸಿದರು.
ಅಫ್ಘಾನಿಸ್ತಾನ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದರು. ನವೀನ್ ಉಲ್ ಹಕ್ 2, ಮುಹಮ್ಮದ್ ನಬಿ, ಅಝ್ಮತುಲ್ಲಾ ಓಮರ್‌ಝಾಯಿ ತಲಾ ಎರಡು ವಿಕೆಟ್ ಪಡೆದರು.